ಹುಬ್ಬಳ್ಳಿ : ಕರೋನಾ ಪೀಡಿತ ಜಿಲ್ಲೆಗಳಿಂದ ಬಂದಿರುವವರನ್ನು ಕ್ವಾರಂಟೈನ್ ನಲ್ಲಿಡಬೇಕೆಂಬುದು ಸರಕಾರದ ಮಾರ್ಗಸೂಚಿಯಾಗಿದೆ. ಆದರೆ ಆಂಧ್ರದ ಹೈದರಾಬಾದ್ ನಿಂದ ಬಂದಿದ್ದ ವ್ಯಕ್ತಿಯೊಬ್ಬರು ಸರಕಾರಿ ಕ್ವಾರಂಟೈನ್ ಗೆಂದು ತೆರಳಿದರೆ ಅವರನ್ನು ಇಲ್ಲಿನ ಕಿಮ್ಸ್ ಸಿಬ್ಬಂದಿ ಖಾಸಗಿ ಲಾಡ್ಜ್ ಗೆ ಬಿಟ್ಟು ಬಂದಿದ್ದಾರೆ.
ತನ್ನನ್ನು ಸರಕಾರಿ ಕ್ವಾರಂಟೈನ್ ನಲ್ಲಿಯೇ ಇರಿಸಿಕೊಳ್ಳಿ ಎಂದು ಕೇಳಿದ ವ್ಯಕ್ತಿಯನ್ನು ಅವರಿಗೆ ವಿಷಯ ತಿಳಿಸದೇ ಕಿಮ್ಸ್ ಸಿಬ್ಬಂದಿ ಇಲ್ಲಿನ ಆರ್ಯದುರ್ಗಾ ಲಾಡ್ಜ್ ಗೆ ಬಿಟ್ಟು ಬಂದಿದ್ದಾರೆ. ಅಲ್ಲಿನ ಮ್ಯಾನೇಜರ್ ರೂಮ್ ಬಾಡಿಗೆ 2 ಸಾವಿರ ರೂ. ನೀಡಿ ಎಂದಾಗಲೇ ಬಂದ ವ್ಯಕ್ತಿಗೆ ಗೊತ್ತಾಗಿದ್ದು ಇದು ಹಣ ತುಂಬಿ ಇರುವ ಕ್ವಾರಂಟೈನ್ ಎಂದು.
ಇವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿ ಕೈಗೆ ಸೀಲ್ ಹಾಕಿ ಜಿಲ್ಲಾಡಳಿತವು ಕಿಮ್ಸ್ ಗೆ ಕಳಿಸಿತ್ತು. ಆದರೆ ಕಿಮ್ಸ್ ಸಿಬ್ಬಂದಿ ಲಾಡ್ಜ್ ಗೆ ಬಿಟ್ಟಿದ್ದರಿಂದ ಕಂಗೆಟ್ಟ ವ್ಯಕ್ತಿಯು ಬೆಂಡಿಗೇರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. ತಕ್ಷಣ ಇನ್ಸಪೆಕ್ಟರ್ ಅರುಣಕುಮಾರ ಸೋಳಂಕಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರನ್ನು ಸಂಪರ್ಕಿಸಿ ಸರಕಾರಿ ಕ್ವಾರಂಟೈನ್ ಗೆ ಕಳುಹಿಸಿದ್ದಾರೆ ಎಂಬುದು ಗೊತ್ತಾಗಿದೆ.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English