ಚಿಕ್ಕೋಡಿ : ಕೊರೋನಾ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಟೈಗರ್ ಎಂಬ ಹೆಸರಿನ ನಾಯಿಯೊಂದಕ್ಕೆ ಕ್ವಾರಂಟೈನ್ ಮಾಡಲಾಗಿದೆ.
ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇನಾಪುರ ಗ್ರಾಮದ ಶಿಂಧೆ ಎನ್ನುವ ಕುಟುಂಬದವರು ಕೋಲ್ಕತ್ತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಿಂದ ತಮ್ಮೊಂದಿಗೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಈ ನಾಯಿಯನ್ನು ಕರೆ ತಂದಿದ್ದಾರೆ. ಊರಿನಿಂದ ಬಂದ ನಂತರ ತಮ್ಮ ಕೋಳಿ ಫಾರಂನಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ತಮ್ಮೊಂದಿಗೆ ನಾಯಿಯನ್ನೂ ಕ್ವಾರಂಟೈನ್ ಮಾಡಿರುವುದು ವಿಶೇಷ.
5 ವರ್ಷಗಳಿಂದ ಸಾಕಿರುವ ಟೈಗರ್ ನನ್ನು ನನ್ನ ಮಗನಂತೆ ಸಾಕಿದ್ದೇನೆ ಎನ್ನುವ ಶಿಂಧೆ, ಎಲ್ಲಿಯೇ ಹೋದರೂ ನನ್ನ ಜೊತೆಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ. ಊರಿಗೆ ಬಂದಾಗ ಊರ ಜನರು ನಾಯಿಯಿಂದಲೂ ಕೊರೋನಾ ಬರಬಹುದು ಎಂದಾಗ ನನ್ನ ಕುಟುಂಬದೊಂದಿಗೆ ನಾಯಿಯನ್ನೂ ಕ್ವಾರಂಟಿನಲ್ಲಿದ್ದೇನೆ ಎನ್ನುತ್ತಾರೆ.
ನಿತ್ಯ ಇದಕ್ಕೆ ಎರಡು ಬಾರಿ ಬಿಸಿಲ ಬೇಗೆ ತಡೆದುಕೊಳ್ಳಲು ತಣ್ಣೀರಿನ ಸ್ನಾನ ಮಾಡಿಸಲಾಗುತ್ತಿದೆ. ಮುದ್ದಿನ ನಾಯಿ ಟೈಗರ್ ಗೆ ಕ್ವಾರಂಟೈನ್ ಹೊಸ ಅನುಭವ ಎಂದಿದ್ದಾರೆ.
Click this button or press Ctrl+G to toggle between Kannada and English