ಮಂಗಳೂರು : ಪುತ್ರನೊಬ್ಬ ತನ್ನ ತಂದೆಯನ್ನು ಲಾಡ್ಜ್ ಮೇಲಿಂದ ಕೆಳಗೆ ಬೆತ್ತಲೆಯಾಗಿ ಎಳೆದು ತಂದು ರಸ್ತೆ ಬದಿಯಲ್ಲಿ ಮಲಗಿಸಿ ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ಲಾಡ್ಜ್ ಮಾಲೀಕರು ಹಾಗೂ ಸಿಬ್ಬಂದಿ, ರೋಗಿಗೆ ಶುಶ್ರೂಷೆ ನೀಡಿ ಮರಳಿ ಲಾಡ್ಜ್ ರೂಮಿನಲ್ಲಿ ಮಲಗಿಸಿದ್ದಾರೆ.
ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಟೆಂಡರ್ ಆಗಿರುವ ಬಜಪೆ ನಿವಾಸಿ ವೃದ್ಧ ಆರೋಗ್ಯ ಸಮಸ್ಯೆಯಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು, 15 ದಿನಗಳಿಂದ ಆಸ್ಪತ್ರೆ ಎದುರುಗಡೆಯ ಲುಲು ಲಾಡ್ಜ್ನಲ್ಲಿ ಇದ್ದು ಕೊಂಡು ಚಿಕಿತ್ಸೆ ಮುಂದುವರಿಸಿದ್ದರು. ತಂದೆಯನ್ನು ಬೆತ್ತಲೆಯಾಗಿ ಲಾಡ್ಜ್ ಮೇಲಿಂದ ಎಳೆದು ತಂದ ಮಗ ಈ ಸಂದರ್ಭ ಅವರ ಜತೆಗೆ ಪುತ್ರ ಇದ್ದರು. ಈ ಹಿಂದೆ ಮಾನಸಿಕವಾಗಿ ಬಳಲುತ್ತಿದ್ದ ಪುತ್ರನನ್ನು ತಂದೆಯೇ ನೋಡಿಕೊಳ್ಳುತ್ತಿದ್ದರು. ಬಳಿಕ ಅವರೇ ಅನಾರೋಗ್ಯಕ್ಕೀಡಾಗಿದ್ದರು.
ಇವರ ಇಬ್ಬರು ಪುತ್ರರು ಮುಂಬೈನಲ್ಲಿದ್ದು, ತಂದೆಯ ಅನಾರೋಗ್ಯದ ಸುದ್ದಿ ತಿಳಿದು ನಗರಕ್ಕೆ ಜೂನ್ 22 ರಂದು ಬಂದು ತಲುಪಿದ್ದರು.ಮಂಗಳೂರಿನಲ್ಲಿ ಏಳು ದಿನಗಳಿಂದ ಕ್ವಾರಂಟೈನ್ನಲ್ಲಿರುವ ಅವರು ನಾಳೆ ದೇರಳಕಟ್ಟೆಗೆ ಆಗಮಿಸುವವರಿದ್ದರು. ಈ ನಡುವೆ ತಂದೆಯ ಜತೆಗಿದ್ದ ಪುತ್ರ ಲಾಡ್ಜ್ನ ಒಂದನೇ ಮಹಡಿಯಿಂದ ತಂದೆಯ ಕಾಲುಗಳನ್ನು ಹಿಡಿದು ಎಳೆದುಕೊಂಡು ಬಂದಿದ್ದಾನೆ. ಈ ವೇಳೆ ಅವರು ತೊಟ್ಟಿದ್ದ ಲುಂಗಿ ಮತ್ತು ಮೂತ್ರಕ್ಕಾಗಿ ಹಾಕಲಾಗಿದ್ದ ಪೈಪ್ಗಳು ಕಳಚಿ ಹೋಗಿದೆ.
ರಸ್ತೆಬದಿಯಲ್ಲಿ ಅನಾಥ ಸ್ಥಿತಿಯಲ್ಲಿ ಬಿಟ್ಟು ಪುತ್ರ ಪರಾರಿಯಾದ ಬಳಿಕ ಸ್ಥಳೀಯ ಶಾಜಿದ್, ದೀಪಕ್ ಕುಮಾರ್ ಮತ್ತು ಲಾಡ್ಜ್ ಮಾಲೀಕರಾದ ಖಲೀಲ್ ಅವರು ವಾಪಸ್ ರೂಮಿನಲ್ಲಿರಿಸಿ ಶುಶ್ರೂಷೆ ನೀಡಿ ಮಾನವೀಯತೆ ಮೆರೆದಿದ್ದಾರೆ.
Click this button or press Ctrl+G to toggle between Kannada and English