ಮದುವೆ, ಮುಂಜಿಗೆ ಹೋಗುವ ಫೋಟೋಗ್ರಾಫರ್‌ ಗಳು ಅಂತರ ಕಡ್ಡಾಯ ಪಾಲಿಸಿ

3:52 PM, Friday, May 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

 kiran--hpva-hiomeopathic ಹುಬ್ಬಳ್ಳಿ : ವರದಿ : ಶಂಭು, ಮೆಗಾಮೇಡಿಯಾ ನ್ಯೂಸ್- ಸಮಾಜದಲ್ಲಿ ಮುಖ್ಯ ವೃತ್ತಿಯಾದ ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಗಳಾದ ನಾವೆಲ್ಲರೂ ಮದುವೆ ಮುಂಜಿವೆಗಳಿಗೆ ಹೋಗ್ತೇವೆ ಅಲ್ಲಿ ಅಂತರ ಕಾಯುವಿಕೆ, ಮತ್ತು ಸ್ವಲ್ಪ ದಿವಸ ಹೊರಗಿನ ಪದಾರ್ಥಗಳನ್ನು ತಿನ್ನಲು ನಿಲ್ಲಿಸಬೇಕು ಎಂದು ಹುಬ್ಬಳ್ಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು.

ಅವರು ನಗರದಲ್ಲಿ ಮೇ. 28 ರಂದು ಹಮ್ಮಿಕೊಂಡಿದ್ದ ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಗಳಿಗಾಗಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಮತ್ತು ಧಾರವಾಡ ಜಿಲ್ಲಾ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸಿನಿಕ್‌ ಆಲ್ಬಮ್‌ ಮಾತ್ರೆ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವೆಲ್ಲರೂ ಆರೋಗ್ಯಕ್ಕಾಗಿ ದಿನಂಪ್ರತಿ ಅರ್ಧ ಘಂಟೆಯಾದರೂ ದೈಹಿಕ ವ್ಯಾಯಾಮ, ಯೋಗ ಮಾಡಿದ್ದೆಯಾದರೆ ಯಾವುದೇ ರೋಗವನ್ನು ತಡೆಗಟ್ಟಬಹುದು ಮತ್ತು ಬಿಸಿನೀರು ಸೇವನೆ, ವೇಳೆಗೆ ಸರಿಯಾಗಿ ಊಟ ಮಾಡಬೇಕು ಎಂದರು.

ಮುಖ್ಯ ಅತಿಥಿ ಡಾ.ಮಹೇಶ ನಾಲವಾಡ ಮಾತನಾಡಿ, ಇಂದಿನ ಕಾಲಮಾನದಲ್ಲಿ ನಮ್ಮ ಆರೋಗ್ಯದ ಶತ್ರು ಯಾರು? ಹೇಗೆ? ಎಂದು ನಮಗೆ ಗೊತ್ತಿಲ್ಲ ಆದರೆ ನಾವು ಅಂತರ್ ಕಾಯ್ದು, ಯೋಗಾಭ್ಯಾಸ ಮಾಡಬೇಕು ಎಂದರು.

ದಿನನಿತ್ಯ ಬಳಸುವ ಅಡುಗೆ ಮನೆಯ ವನಸ್ಪತಿಗಳು ಊಟದಲ್ಲಿ ಅಳವಡಿಸಿದ್ದಾದರೆ ನಾವು ಈ ಕೊರೋನಾ ವನ್ನು ಹೊಡೆದೋಡಿಸಬಹುದು. ನಾವು ನಮ್ಮ ಮೊದಲಿನ ಪದ್ಧತಿಯಂತೆ ಪಾದರಕ್ಷೆಗಳನ್ನು ಮನೆಯ ಹೊರಗಡೆ ಇಡಬೇಕು, ಕಾಲು ತೊಳೆದು ಒಳಗೆ ಬರಬೇಕು, ದಿನಂಪ್ರತಿ ಸ್ನಾನ, ಕೈಗಳು ಸಾಬೂನಿನಿಂದ ತೊಳೆಯುವುದು, ಅಕ್ಕಪಕ್ಕದ ನಮ್ಮ ವಾತಾವರಣ ಸ್ವಚ್ಛವಾಗಿರಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ, ಸೋಮಶೇಖರ್ ಹುದ್ದಾರ, ರವೀಂದ್ರ, ಸಂದೀಪ ಕುಲಕರ್ಣಿ, ಸಮೀರ್ ಕುಮಾರ್, ಅಮಿತ್ ಎಂ. ಎಸ್. ಆಗಮಿಸಿದ್ದರು.

ದಿನೇಶ ದಾಬಡೆ, ಜಯೇಷ ಇರಕಲ್‌, ಅನಿಲ ತುರಮರಿ, ಗುರುರಾಜ ಕುಲಕರ್ಣಿ, ಆನಂದ ರಾಜೊಳ್ಳಿ, ಕೃಷ್ಣಾ ಪೂಜಾರಿ, ರವಿ ಕಾಟಿಗರ, ರಿಯಾಜ, ಶಿವಾನಂದ ಹಳಿಜೋಳ, ಪ್ರವೀಣ್ ಹಣಗಿ, ಶಂಕರ್ ಮಿಸ್ಕಿನ್, ಪ್ರಕಾಶ ಬಸವಾ, ರಷೀದ್, ವಜೀರ, ವಿನಾಯಕ್ ಬಾಕಳೆ, ವಿಜಯ ಬಾಕಳೆ, ಕಾಟಕರ್, ಆನಂದ್ ಹುಲಮನಿ, ಶನೂಲ್ ಕಟಕೊಳ್, ವಿ. ಎಸ್.ಕೆ. ಮಠ್, ತಿಮ್ಮನಗೌಡರ್, ಕುಲಮಿ, ಪ್ರಭಾಕರ ಮಾಂಡ್ರೆ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English