ಲೋಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೇವಾನಿರತರಾದವರಿಗೆ ಉದ್ಯಮಿ ಎನ್. ಟಿ. ಪೂಜಾರಿಯವರ ಸಹಾಯ

10:07 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

NT-poojaryಮುಂಬಯಿ : ಮಹಾನಗರದ ಜನಪ್ರಿಯ ಹೋಟೇಲು ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾರ್ಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿಯವರು ಜನಸಾಮಾನ್ಯರ ಸೇವೆಯಲ್ಲಿ ಈಗಾಗಲೇ ಜನಪ್ರಿಯರಾಗಿದ್ದು. ಕಳೆದ ಹಲವಾರು ವರ್ಷಗಳಿಂದ ತನ್ನ ತವರೂರಲ್ಲಿ ಅನೇಕ ಜೋಡಿಗಳಿಗೆ ತನ್ನ ಸ್ವಂಥ ಖರ್ಚಿನಿಂದ ವಿವಾಹ ಮಾಡಿಸುತ್ತಿರುವ ಕೊಡುಗೈ ದಾನಿಯಾಗಿರುವರು.

ಇದೀಗ ಲೋಕ್ ಡೌನ್ ನಿಂದಾಗಿ ಆರಂಭದ ದಿನದಿಂದಲೇ ಮುಂಬಯಿ ಮಹಾನರಗದ ಪ್ರಮುಖ ಬಾಗಗಳಲ್ಲಿರುವ ’ಬಿ’ ಹಾಗೂ ’ಸಿ’ ವಾರ್ಡ್ ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ನೂರಕ್ಕೂ ಅಧಿಕ ವೈದ್ಯರಿಗೆ, ನರ್ಸಗಳಿಗೆ ಹಾಗೂ ಇತರ ಸಿಬ್ಬಂದ್ದಿಗಳು ಸೇರಿ ಈಗಾಗಲೇ ಸುಮಾರು ಎಂಟು ಸಾವಿರ ಮಂದಿಗೆ ತನ್ನ ಶಿವ ಸಾಗರ್ ಗ್ರೂಫ್ ಆಫ್ ಹೋಟೇಲ್ಸನ ಮೂಲಕ ಆಹಾರವನ್ನು ಇವರು ಒದಗಿಸುತ್ತಾ ಬಂದಿರುವರು.

ಇಂದಿನ ಈ ಸಂದಿಗ್ದ ಪರಿಸ್ಥಿತಿಯನ್ನು ನೋಡುವಾಗ ಈ ಸೇವೆ ಅನಿವಾರ್ಯವಾಗಿದ್ದು ಈ ಬಗ್ಗೆ ಯವುದೇ ಪ್ರಚಾರವನ್ನು ಬಯಸುವುದು ಸರಿಯಲ್ಲ ಎಂದು ನಗರದ ಭಾರತ್ ಬ್ಯಾಂಕಿನ ನಿರ್ದೇಶಕರೂ ಆದ ಎನ್. ಟಿ. ಪೂಜಾರಿಯವರು ಹೇಳುತ್ತಾರೆ. ಇಂದಿನ ಈ ಸಂಕಷ್ಟದ ಸಮಯದಲ್ಲಿ ಹೊರನಾಡಿನಲ್ಲಿ ಸದ್ದುಗದ್ದಲವಿಲ್ಲದೆ ಜನಸಾಮಾನ್ಯರ ಹಸಿವು ನೀಗಿಸುವ ಸೇವೆ ಮಾಡುತ್ತಿರುವ ಮಹಾ ದಾನಿ ಇವರು.

ಮಹಾನಗರದಲ್ಲಿದ್ದು ಕಾರಣಾಂತರದಿಂದ ಕರ್ನಾಟಕಕ್ಕೆ ಹೋಗಲಿಚ್ಚಿಸುವ ತುಳು-ಕನ್ನಡಿಗರಿಗೆ ಕರ್ನಾಟಕ ಸರಕಾರವು ಅನುಮತಿ ನೀಡಬೇಕೆಂದು ಎನ್. ಟಿ. ಪೂಜಾರಿಯವರು ಕರಾವಳಿಯ ಶಾಸಕರನ್ನು ಹಾಗೂ ಕರ್ನಾಟಕ ಸರಕಾರವನ್ನು ವಿನಂತಿಸಿದ್ದಾರೆ.

ವರದಿ : ಈಶ್ವರ ಎಂ. ಐಲ್

image description

1 ಪ್ರತಿಕ್ರಿಯೆ - ಶೀರ್ಷಿಕೆ - ಲೋಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೇವಾನಿರತರಾದವರಿಗೆ ಉದ್ಯಮಿ ಎನ್. ಟಿ. ಪೂಜಾರಿಯವರ ಸಹಾಯ

  1. Kiran jakati, Hangal

    ಸರ್ ನನ್ನ ತಾಯಿ ಅನಾರೋಗ್ಯ ದಿಂದ ಬಳಲುತ್ತಿದ್ದಾರೆ .. ನನಗೆ ಕೆಲ್ಸಾ ಸಹ ಸಿಗ್ತಿಲ್ಲ ನನಗೆ ಹಣದ ತೊಂದರೆ ಇದೆ ದಯವಿಟ್ಟು ನೀವು ಸಹಕರಿಸಿ ಸರ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English