2 ಸಾವಿರ ಕೊಟ್ಟು ಕೋವೀಡ್‌ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಗೋವಾಕ್ಕೆ ಎಂಟ್ರಿ

11:45 AM, Sunday, May 31st, 2020
Share
1 Star2 Stars3 Stars4 Stars5 Stars
(No Ratings Yet)
Loading...

polem-checkpostಪಣಜಿ : ಕರ್ನಾಟಕದಿಂದ ಗೋವಾಕ್ಕೆ ಹೋಗಬೇಕೆನ್ನುವವರು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಗೋವಾ ರಾಜ್ಯಕ್ಕೆ ಹೊರಟವರಿಗೆ ಅವರ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿದೆ. ಇದರಿಂದಲೇ ಗೋವಾ ಸರಕಾರ ರಾಜ್ಯಕ್ಕೆ ಆಗಮಿಸಿರುವ ಕರ್ನಾಟಕದವರಿಂದ ಪ್ರತಿಯೊಬ್ಬರಿಗೆ 2 ಸಾವಿರ ದಂತೆ ಕೋವಿಡ್‌ ಪರೀಕ್ಷೆಗಾಗಿ ಒಟ್ಟು 18,24,000 ರೂ. ಪ್ರತಿಯೊಬ್ಬರಿಂದ ಶುಲ್ಕ ವಸೂಲಿ ಮಾಡಿದೆ.

ಕಾರವಾರದಿಂದ ಪೋಳೆಮ್ ಚೆಕ್‌ ಪೋಸ್ಟ್‌ ಮೂಲಕ ಗೋವಾಕ್ಕೆ ತೆರಳುವವರಿಗೆ ಈ ಪರೀಕ್ಷೆ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಗೋವಾ ರಾಜ್ಯದ ಕಾಣಕೋಣ ತಹಶೀಲ್ದಾರ್‌ ವಿನೋದ ದಲಾಲ್‌, ಕಳೆದ ವಾರದಿಂದ ಗೋವಾ ಸರಕಾರ ಹೊರ ರಾಜ್ಯಗಳಿಂದ ಬರುವವರು ಕೋವಿಡ್‌ ನೆಗೆಟಿವ್‌ ಇರುವ ಸರ್ಟಿಫೀಕೇಟ್‌ ತೋರಿಸಿದರೆ ಮಾತ್ರ ರಾಜ್ಯದೊಳಗೆ ಬಿಡಿ ಎಂದು ಆದೇಶಿಸಿದೆ ಎಂದಿದ್ದಾರೆ.

ಸರ್ಟಿಫಿಕೇಟ್‌ ಇಲ್ಲದವರು ತಮ್ಮ ದುಡ್ಡಿನಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದರೆ ಅವರನ್ನು ಸರಕಾರಿ ಕ್ವಾರಂಟೈನ್‌ ನಲ್ಲಿ ಇಡಲಾಗುತ್ತಿದ್ದು, ರಾತ್ರಿ 8 ಗಂಟೆಯ ನಂತರ ಹೊರ ರಾಜ್ಯದವರಿಗೆ ಪ್ರವೇಶ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಗೋವಾಕ್ಕೆ ಬಂದವರನ್ನು ಮಡಗಾಂವ್ ನ ಇಎಸ್‌ ಐ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಕರೆದುಕೊಂಡು ಹೋಗಲಾಗುತ್ತಿದ್ದು, ಕೂಲಿ ಕಾರ್ಮಿಕರು ಹಾಗೂ ಇತರರು ಕಾಲ್ನಡಿಗೆ ಮೂಲಕ ಗೋವಾಕ್ಕೆ ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು ಪ್ರತಿಯೊಬ್ಬರೂ ಪರೀಕ್ಷೆಗೆ 2000 ರೂ. ಶುಲ್ಕ ಭರಿಸಬೇಕಾಗುತ್ತದೆ. ಪರೀಕ್ಷೆಗೆ ಬೇಡವೆನ್ನುವವರನ್ನು ಮರಳಿ ಅವರ ರಾಜ್ಯದ ಗಡಿಯೊಳಗೆ ಬಿಡಲಾಗುತ್ತದೆ ಎಂದು ದಲಾಲ್‌ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English