ಹುಡುಗೀರು ಮಾಡ್ತಾರೆ ಕಣ್ಣಲ್ಲೇ ಲವ್ವು, ಹುಡುಗೀರು ಕೈ ಕೊಟ್ಟರೆ..

4:38 PM, Thursday, June 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

girl eyesನನ್ನವಳು.

ನನ್ನ ಗೆಳತಿಯ
ಹೆಸರು ಭವ್ಯ ,
ಅವಳಾಡುವ ತುಂಟಾಟ
ಕಂಡರೆ ಬರೆಯಬಹುದು
ದಿನಕ್ಕೊಂದು ಕಾವ್ಯ. (01)

******

ಸೋಮಾರಿ.

ನನ್ನ ಗಂಡ ಸೋಮಾರಿ
ದಿನ ಬೇಕಂತಾನ
ದೋಸೆ – ಪೂರಿ,
ದುಡಿಯಾಕೋಗಂದರ
ಹೊದಿಕೊಂಡು
ಮಲಕೋತಾನ್ರೀ. (02)

*******

ಬಜಾರಿ

ನನ್ನವಳು ಬಜಾರಿ
ದಿನ ಬಾಯಾಡ್ಸುತ್ತಾಳೆ
ಗರಿಗರಿ ಚುರುಮುರಿ. (03)

*******

ಕುಡುಕ

ಗೆಳೆಯ ತಂದ್ಕೊಟ್ಟ
ನನಗೊಂದು ಬಾಟಲ್,
ಅಲ್ಲಿಂದ ಸುರುವಾಯ್ತು
ನನಗೊಂದು ಟೈಟಲ್. (04)

*******

ಲವ್ವು – ನೋವು

ಹುಡುಗೀರು ಮಾಡ್ತಾರೆ
ಕಣ್ಣಲ್ಲೇ ಲವ್ವು ,
ಹುಡುಗೀರು ಕೈ ಕೊಟ್ಟರೆ
ಹುಡುಗರು ಮರಿತಾರೆ
ಎಣ್ಣೇಲೆ ನೋವು.
*******
Majunath

ರಚನೆ:
ಮಂಜುನಾಥ ಗುತ್ತೇದಾರ.
ಸಾ// ದೇವಸೂಗೂರು.
ತಾ//ಜಿ// ರಾಯಚೂರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English