ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಮಹಾ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತಾನು 4 ಮದುವೆಯಾಗಿದ್ದೇನೆ. 23 ಗರ್ಲ್‌ಫ್ರೆಂಡ್ಸ್‌ನ ಮೇಂಟೇನ್ ಮಾಡ್ತಿದ್ದೀನಿ ಅಂತ ಈತ ಹೇಳಿಕೊಂಡಿದ್ದಾನೆ,
ಮೈಸೂರು ಮೂಲದ ಸುರೇಶ್ ವಿಚ್ಚೇಧಿತ ಮಹಿಳೆಯೊಬ್ಬರ ಬಳಿ ಹೋಗಿದ್ದ ಈತ ನಿನಗೆ ಬಾಳು ಕೊಡ್ತೇನೆ ಒಂದು ನನಗೆ ಒಂದು ಸೈಟ್ ಕೊಡ್ಸು ಅಂದಿದ್ದ. ಅದಕ್ಕೆ 10 ಲಕ್ಷ ಕೊಡು ಅಂತಾ ಬೇಡಿಕೆ ಇಟ್ಟಿದ್ನಂತೆ. ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಹಣ ಇಲ್ಲ, ಒಡವೆಗಳಿವೆ ಅದನ್ನು ಅಡವಿಟ್ಟು ಹಣ ಪಡೆಯುವಂತೆ ಹೇಳಿದ್ದಾರೆ. ಬಳಿಕ ಮಹಿಳೆ ತನ್ನ ಮಾಂಗಲ್ಯ ಸರ ಸೇರಿ 80 ಗ್ರಾಂ ಒಡವೆಯನ್ನು ವಂಚಕ ಸುರೇಶ್‌ಗೆ ನೀಡಿದ್ದಾರೆ. ಒಡವೆ ಪಡೆದುಕೊಂಡ ಆಸಾಮಿ, ಫೋನ್ ಮಾಡಿದ್ರು ರಿಸೀವ್ ಮಾಡದೇ ಎಸ್ಕೇಪ್ ಆಗಿದ್ದಾನೆ. ಬಳಿಕ ಎಚ್ಚೆತ್ತ ಮಹಿಳೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದುಡ್ಡಿರುವ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರಿಗೆ ಬಾಳು ಕೊಡ್ತೀನಿ ಅಂತಾ ನಂಬಿಸೋದು, ಕೊನೆಗೆ ಹಣ ಪಡೆದು ವಂಚಿಸೋದೆ ಈ ಸುರೇಶ್‌ನ ಗೀಳಾಗಿತ್ತಂತೆ. ಮ್ಯಾಟ್ರಿಮೋನಿಯಲ್ಲಿ ವಿಚ್ಚೇಧಿತ ಮಹಿಳೆರನ್ನು ಹುಡುಕಿ ಅವರ ಜೊತೆ ಸಲುಗೆ ಬೆಳೆಸಿಕೊಂಡು ವಂಚನೆಗೆ ಇಳಿಯುತ್ತಿದ್ದನಂತೆ.
ಮಹಿಳೆ ಕೊಟ್ಟ ದೂರನ್ನ ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು, ಸುರೇಶ್‌ನನ್ನು ಬಂಧಿಸಿದ್ದಾರೆ. ಬಳಿಕ ಆರೋಪಿ ಸುರೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾಗ ತಾನು 4 ಮದುವೆಯಾಗಿದ್ದೇನೆ. 23 ಗರ್ಲ್‌ಫ್ರೆಂಡ್ಸ್‌ನ ಮೇಂಟೇನ್ ಮಾಡ್ತಿದ್ದೀನಿ ಅಂತಾ ನಿಜಾಂಶ ಬಾಯ್ಬಿಟ್ಟಿದ್ದಾನೆ. ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಹಲವು ಮಹಿಳೆಯರಿಗೆ ಈ ಮಹಾ ವಂಚಕ ಮೋಸ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿಯನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.
Click this button or press Ctrl+G to toggle between Kannada and English