ಮಂಗಳೂರು: ವಿಚಿತ್ರ ಲಕ್ಷಣದ ಕೋವಿಡ್ ದಕ್ಷಿಣ ಕನ್ನಡ ದಲ್ಲಿ ಕಾಣಿಸಿಕೊಂಡಿದೆ ಉಸಿರಾಟ ಸಮಸ್ಯೆ, ಜ್ವರ ಹೀಗೆ ಯಾವುದೇ ಸೋಂಕು ಲಕ್ಷಣ ಇಲ್ಲದೇ ಇದ್ದರೂ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಕೋವಿಡ್ -19 ಸೋಂಕು ಕಾಣಿಸಿಕೋಳ್ಳುತ್ತಿದೆ.
ಮಂಗಳೂರಿನ ಈ ಇಬ್ಬರು ಕೋವಿಡ್ 19 ಸೋಂಕಿತರನ್ನು ಆರು ಬಾರಿ ಟೆಸ್ಟ್ ಮಾಡಿಸಿದಾಗಲೂ ಆರು ಬಾರಿಯೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಕೋವಿಡ್-19 ಸೋಂಕಿತರ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಈ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಿಗೆ ಪರಿಣಮಿಸಿದೆ.
ಮೇ.12ರಂದು ದುಬೈನಿಂದ ಬಂದಿದ್ದ 81 ವರ್ಷದ ವೃದ್ಧ ಮತ್ತು ಮೇ.18ರಂದು ದುಬೈನಿಂದ ಬಂದಿದ್ದ 76 ವರ್ಷದ ವೃದ್ದ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕು ದೃಢವಾಗಿ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಇನ್ನೂ ಬಿಡುಗಡೆ ಭಾಗ್ಯವಿಲ್ಲ ಎಂಬಂತಾಗಿದೆ.
ಆದರೆ ಇಬ್ಬರಿಗೂ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆದರೆ ಆಸ್ಪತ್ರೆಯಲ್ಲಿ ಆರು ಬಾರಿ ಕೋವಿಡ್-19 ಟೆಸ್ಟ್ ನಡೆಸಿದರೂ ಪಾಸಿಟಿವ್ ವರದಿ ಬರುತ್ತಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ 81 ವರ್ಷ ವೃದ್ದನ ಪತ್ನಿ, ಮಗಳಿಗೂ ಕೋವಿಡ್-19 ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಅವರಿಬ್ಬರೂ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದರೂ ವೃದ್ಧ ಮಾತ್ರ ಆಸ್ಪತ್ರೆಯಲ್ಲೇ ಇದ್ದಾರೆ.
Click this button or press Ctrl+G to toggle between Kannada and English