ಮಂಗಳೂರು : ದಕ್ಕೆ ಯಲ್ಲಿ ಪ್ರಸ್ತುತ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ ಸೋಂಕು ಲಕ್ಷಣ ಗಳ ಕಾರಣಕ್ಕಾಗಿ ವ್ಯವಹಾರ ಸ್ಥಗಿತ ಗೊಳಿಸುವ ಬಗ್ಗೆ ದಕ್ಕೆ ಹಸಿ ಮೀನು ವ್ಯಾಪಾರಸ್ತರು ಮತ್ತು ಕಮಿಷನ್ ಏಜೆಂಟ್ ರ ಸಂಘ ಮಂಗಳೂರು ಇದರ ಅಧ್ಯಕ್ಷ ಕೆ. ಅಶ್ರಫ್ ಅವರು ದ.ಕ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ನಡುವೆ ದಕ್ಕೆಯ ಮೀನು ವ್ಯಾಪಾರದ ಸ್ಥಳಕ್ಕೆ ತೆರಳಿ, ಅಲ್ಲಿಂದ ಮೀನು ತಂದು, ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ, ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆಯಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ. ಈ ವೇಳೆ ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೊರೊನ ಸೋಂಕು ತಾಗಿರುವುದು ಖಚಿತವಾಗಿದೆ. ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎನ್ನಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳು
ದ.ಕ.ಜಿಲ್ಲೆ
ಮಂಗಳೂರು
ಇವರಿಗೆ ,
ಕೆ.ಅಶ್ರಫ್
ಕಾರ್ಯಾಧ್ಯಕ್ಷರು
ಮಂಗಳೂರು ದಕ್ಕೆ ಹಸಿ ಮೀನು ವ್ಯಾಪಾರಸ್ತರು ಮತ್ತು ಕಮಿಷನ್ ಏಜೆಂಟ್ ರ ಸಂಘ
ಮಂಗಳೂರು.
9448143937
email: hanifdkmv@gmail.com
ವಿಷಯ : ಮಂಗಳೂರು ದಕ್ಕೆ ಯಲ್ಲಿ ಪ್ರಸ್ತುತ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ ಸೋಂಕು ಲಕ್ಷಣ ಗಳ ಕಾರಣಕ್ಕಾಗಿ ವ್ಯವಹಾರ ಸ್ಥಗಿತ ಗೊಳಿಸುವ ಬಗ್ಗೆ
ಮಂಗಳೂರು ದಕ್ಕೆ ಯಲ್ಲಿ ಕೆಲವು ದಿನಗಳಿಂದ ಈಚೆಗೆ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ ಸೋಂಕು ಲಕ್ಷಣಗಳು, ಜ್ವರ, ನೆಗಡಿ ಶೀತ ಮತ್ತು ಕೆಲವು ನಿರ್ಧಿಷ್ಟ ವರ್ತಕರು ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆ ಮತ್ತು ಕಾರಣಕ್ಕಾಗಿ, ನಾವು ನಮ್ಮ ದಕ್ಕೆಯ ಸರ್ವ ವ್ಯವಾಹಾರ ವನ್ನೂ ನಾಳೆಯಿಂದ ಮೊದಲ್ಗೊಂಡು ಮುಂದಿನ ಹತ್ತು ದಿನಗಳವರೆಗೆ ಸ್ಥಗಿತ ಗಳಿಸಲು ನಿರ್ಧರಿಸಿ, ದಕ್ಕೆ ರಖಂ ( ಹೋಲ್ ಸೇಲ್) ಮೀನು ಮಾರ್ಕೆಟ್ ವ್ಯಾಪಾರ ಸ್ಥಗಿತ ಮಾಡಲು ನಿರ್ಧರಿಸಿದ್ದೇವೆ. ವ್ಯವಹಾರ ಸ್ಥಗಿತ ಗೊಳಿಸಿ ದರೂ ಕೂಡ ಕೆಲವು ವ್ಯವಹಾರಸ್ಥರು ಅನಧಿಕೃತ ವಾಗಿ ಇತರೆಡೆ ವ್ಯವಹಾರ ಆರಂಭಿಸದಂತೆ ನಿಷೇಧಿಸ ಬೇಕಾಗಿ ವಿನಂತಿ ಮತ್ತು ಆಸು ಪಾಸು ಪರಿಸರ ವಾದ ಉಳ್ಳಾಲ ಕೋಟೆ ಪುರ, ಹೊಯ್ಗೆ ಬಜ್ಜಾರ್,ಬೆಂಗ್ರೆ,ಪರಂಗಿ ಪೇಟೆ, ವೀ.ಆರ್.ಎಲ್ ಸಮೀಪ ,ಕುದ್ರೋಳಿ,ಕಲ್ಲಾಪು ಹಾಗೂ ಮಾರಿಪಲ್ಲ ಇತ್ಯಾದಿ ಕಡೆ ಯಾವುದೇ ವರ್ತಕರು ಅನಧಿಕೃತ ಮತ್ಸ್ಯ ವ್ಯವಹಾರ ನಿಷೇಧಿಸಿ ಆದೇಶ ಹೊರಡಿಸ ಬೇಕಾಗಿ ವಿನಂತಿ.
ಕೆ.ಅಶ್ರಫ್,( ಕಾರ್ಯಾಧ್ಯಕ್ಷ ರು)
23. ಜೂನ್.2020.
Click this button or press Ctrl+G to toggle between Kannada and English