ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ ಅನುಮತಿ-ಸುನಿಲ್ ಕುಮಾರ್ ಬಜಾಲ್

6:03 PM, Tuesday, June 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

cpim ಮಂಗಳೂರು  : ದಿನದಿಂದ ದಿನಕ್ಕೆ ಕೋರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಳವಾಗುತ್ತಿದ್ದು,5 ಲಕ್ಷಕ್ಕೂ ಮೀರಿದೆ.ಅತ್ಯಂತ ಕಡಿಮೆ ಅಪಾಯವಿದ್ದಾಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿ ಇಂದು ಯದ್ವಾತದ್ವಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಸರಕಾರ ಕೈಚೆಲ್ಲಿ ಕೂತಿದೆ.ಇದರಿಂದಾಗಿ ಜನತೆ ಒಂದು ಕಡೆ ಭಯಭೀತಿಗೊಂಡರೆ, ಮತ್ತೊಂದು ಕಡೆ ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ,ತಿನ್ನಲು ಆಹಾರವಿಲ್ಲದೆ ಯಾತನಾಮಯ ಬದುಕು ಸಾಗಿಸುತ್ತಿದ್ದಾರೆ.ಈತನ್ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಜೀವ ರಕ್ಷಿಸುವ ಬದಲು ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ ವಿಪರೀತ ಶುಲ್ಕ ವಸೂಲಿ ಮಾಡಲು ಗ್ರೀನ್ ಸಿಗ್ನಲ್ ನೀಡುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.ಇಂತಹ ಕಠೋರ ಮನೋಸ್ಥಿತಿಯ ಜನದ್ರೋಹಿ ಸರಕಾರಗಳ ವಿರುದ್ದ ಜನತೆ ಹೆಚ್ಚೆಚ್ಚು ಸಂಘಟಿತರಾಗಬೇಕೆಂದು* CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಹೇಳಿದರು.

ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ CPIM ನೇತ್ರತ್ವದಲ್ಲಿ ಜರುಗುತ್ತಿರುವ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಕುಲಶೇಖರದಲ್ಲಿ ಜರುಗಿದ ಬಿತ್ತಿಚಿತ್ರ ಪ್ರದರ್ಶನ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.

CPIM ಕುಲಶೇಖರ ಶಾಖಾ ಕಾರ್ಯದರ್ಶಿ ಶಶಿಕಲಾರವರು ಮಾತನಾಡುತ್ತಾ, *ಲಾಕ್ ಡೌನ್ ಸಂಧರ್ಭದಲ್ಲಿ ಕೆಲಸವಿಲ್ಲದೆ ಕಂಗಾಲಾಗಿದ್ದ ಕಾರ್ಮಿಕರಿಗೆ ವೇತನ ನೀಡಬೇಕೆಂದು ಘೋಷಣೆ ಮಾಡಿದ್ದ ಪ್ರಧಾನಮಂತ್ರಿಗಳು ಮರುದಿನವೇ ವೇತನ ನೀಡದಿದ್ದರೂ ಪರವಾಗಿಲ್ಲ ಎಂದು ಮಾಲಕ ವರ್ಗದ ಪರವಾಗಿ ಹೇಳಿಕೆ ನೀಡುವ ಮೂಲಕ ಕೇಂದ್ರ ಸರಕಾರದ ಜುಟ್ಟು ದೇಶದ ಅಗರ್ಭ ಶ್ರೀಮಂತರ ಕೈಯಲ್ಲಿದೆ ಎಂದು ಸಾಬೀತು ಪಡಿಸಿದ್ದಾರೆ. ಎಲ್ಲಾ ವಿಭಾಗದ ಕಾರ್ಮಿಕರಿಗೆ ಮುಂದಿನ 6 ತಿಂಗಳುಗಳ ಕಾಲ ರೂ.7500 ಹಣವನ್ನು ನೇರ ನಗದು ವರ್ಗಾವಣೆ ಮಾಡಬೇಕು ಹಾಗೂ 10 ಕೆಜಿ ಆಹಾರಧಾನ್ಯಗಳನ್ನು ಪ್ರತೀ ಕುಟುಂಬಕ್ಕೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ CPIM ಕುಲಶೇಖರ ಶಾಖಾ ಸದಸ್ಯರಾದ ವಸಂತಿ,ಗುಲಾಬಿ,ಮೀನಾ,ಕವಿತಾ,ಸವಿತಾ,ಪ್ರಿಯಾಂಕ, ಅಶ್ವಿನಿ ಮುಂತಾದವರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English