ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?

Saturday, August 28th, 2021
Astami

ಮಂಗಳೂರು  : ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ. 1. ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ? ಶ್ರೀಕೃಷ್ಣನ ಜನ್ಮವು ಮಧ್ಯರಾತ್ರಿ 12 ಗಂಟೆಗೆ ಆಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ರಾತ್ರಿ […]

ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ ಅನುಮತಿ-ಸುನಿಲ್ ಕುಮಾರ್ ಬಜಾಲ್

Tuesday, June 30th, 2020
cpim

ಮಂಗಳೂರು  : ದಿನದಿಂದ ದಿನಕ್ಕೆ ಕೋರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಳವಾಗುತ್ತಿದ್ದು,5 ಲಕ್ಷಕ್ಕೂ ಮೀರಿದೆ.ಅತ್ಯಂತ ಕಡಿಮೆ ಅಪಾಯವಿದ್ದಾಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿ ಇಂದು ಯದ್ವಾತದ್ವಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಸರಕಾರ ಕೈಚೆಲ್ಲಿ ಕೂತಿದೆ.ಇದರಿಂದಾಗಿ ಜನತೆ ಒಂದು ಕಡೆ ಭಯಭೀತಿಗೊಂಡರೆ, ಮತ್ತೊಂದು ಕಡೆ ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ,ತಿನ್ನಲು ಆಹಾರವಿಲ್ಲದೆ ಯಾತನಾಮಯ ಬದುಕು ಸಾಗಿಸುತ್ತಿದ್ದಾರೆ.ಈತನ್ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಜೀವ ರಕ್ಷಿಸುವ ಬದಲು ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ […]

ಮಲ್ಲೇಶ್ವರಂ ಪತ್ರಕರ್ತರ ವೇದಿಕೆಯಿಂದ ಸಹಾಯ ಹಸ್ತ

Sunday, May 24th, 2020
Malleshwaram Reporters

ಶಂಭು ಹುಬ್ಬಳ್ಳಿ – ಬೆಂಗಳೂರು : ಮಹಾಮಾರಿ ಕೋರೋನಾದಿಂದ ಈಗಾಗಲೇ ದೇಶವು ಆರ್ಥಿಕವಾಗಿ ಕಂಗೆಟ್ಟಿದೆ. ಈ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿ ಮಹಾಮಾರಿ ಮುಕ್ತವಾಗಿಸಲು ಪಣ ತೊಡಬೇಕಿದೆ. ಈಗಾಗಲೇ ಹಲವಾರು ಸಂಘಟನೆಗಳು, ಸಮಾಜ ಸೇವಕರು, ನಾನಾ ರೀತಿಯಲ್ಲಿ ಸಹಾಯ ಹಸ್ತ ನೆರವು ನೀಡುತ್ತ ಬಂದಿದ್ದಾರೆ. ಈ ಕೋರೋನಾ ಮಹಾಮಾರಿಯಿಂದ ಕಾರ್ಮಿಕ ವರ್ಗದಿಂದ ಹಿಡಿದು ಎಲ್ಲಾ ಸ್ತರದ ಜನರಿಗೂ ಬಿಸಿ ಮುಟ್ಟಿರುವುದು ಖೇದಕರ. ಸಾಮಾನ್ಯ ಜನರು ಆರ್ಥಿಕವಾಗಿ ಬಹಳ ನೊಂದಿದ್ದಾರೆ. ಕೇಂದ್ರ ಸರಕಾರವು ಈಗಾಗಲೇ ಎಲ್ಲಾ ವರ್ಗದ ಜನರಿಗೆ […]

ಬೀಡಿ ಉದ್ಯಮ ಸೋಮವಾರ ಪುನರಾರಂಭ: ಸಚಿವ ಕೋಟ

Saturday, April 18th, 2020
Beedi

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ (ಏ.20) ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀಡಿ ಕಂಪೆನಿಗಳ ಮಾಲೀಕರು, ಬೀಡಿ ಕಾರ್ಮಿಕ ಮುಖಂಡರ ಜತೆ ಸಭೆ ನಡೆಸಿ ಮಾತನಾಡುತ್ತಿದ್ದರು. ದ.ಕ. ಜಿಲ್ಲೆಯಲ್ಲಿ 1.90 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 21 ಸಾವಿರದಷ್ಟು ಬೀಡಿ ಕಾರ್ಮಿಕರಿದ್ದಾರೆ. ಕೋರೋನಾ ಹಿನ್ನೆಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಬಡವರ ಜೀವನಾಧಾರಕ್ಕೆ ಸಮಸ್ಯೆಯಾಗಿರುವುದು ಸರಕಾರದ […]