ಲಾಕ್’ಡೌನ್ ಇಲ್ಲ, ಜನರು ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು : ಸಿ ಎಂ ಯಡಿಯೂರಪ್ಪ

1:28 PM, Tuesday, July 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

yedyurappaಬೆಂಗಳೂರು:  ಜನರು ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು, ಮತ್ತೊಮ್ಮೆ ಲಾಕ್’ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಲಾಕ್’ಡೌನ್ ಭೀತಿಯಿಂದಾಗಿ ವಲಸೆ ಕಾರ್ಮಿಕರು ತವರುಗಳಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನರು ಭೀತಿಗೊಳಗಾಗ ಬಾರದು. ಮುಂಜಾಗ್ರತಾ ಕ್ರಮಗಳೊಂದಿಗೆ ವೈರಸ್ ಜೊತೆಗೆ ಜೀವಿಸುವುದನ್ನು ಕಲಿಯಬೇಕಿದೆ. ವೈರಸ್ ಮಟ್ಟಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ 450 ಹೆಚ್ಚುವರಿ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರಕ್ಕೆ ಜನರು ಸಹಕಾರ ನೀಡಬೇಕು. ಇದು ಪ್ರಧಾನಮಂತ್ರಿಗಳ ಮನವಿ ಕೂಡ ಆದಿಗೆ. ನಿಮ್ಮ ಜೀವ ಅತ್ಯಮೂಲ್ಯವಾದದ್ದು. ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೊಳ್ಳುತ್ತಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಲೂರಿನಲ್ಲಿ 10,000 ಹಾಸಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English