ಕಾಶ್ಮೀರ: ಅಮರನಾಥ ಗುಹೆಯಲ್ಲಿನ ಮಂಜಿನ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಯಾತ್ರಾರ್ಥಿಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಅಮರನಾಥ ದೇವಾಲಯ ಮಂಡಳಿ, ಅಮರನಾಥ ಗುಹೆಯ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಡಿಡಿ ವಾಹಿನಿಯಲ್ಲಿ ಮತ್ತು ಆನ್ ಲೈನ್ ಪ್ರಸಾರ ಮಾಡಲು ನಿರ್ಧರಿಸಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಡೆಸಿದೆ.
ಈ ಹಿಂದಿನ ಯೋಜನೆಯ ಪ್ರಕಾರ ಜಮ್ಮು-ಕಾಶ್ಮೀರ ಆಡಳಿತ ಅಮರನಾಥ ಯಾತ್ರೆಯ ವೇಳೆ 500 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದಕ್ಕೆ ನಿರ್ಧರಿಸಿತ್ತು. ಟ್ವಿನ್ ಟ್ರ್ಯಾಕ್ ನ ಅನಂತ್ ನಾಗ್ ನ ಪಹಲ್ಗಾಮ್ ಹಾಗೂ ಗಂದೇರ್‌ಬಾಲ್ ಜಿಲ್ಲೆಯ ಬಲ್ಟಾಲ್ ನ ಮೂಲಕ ಜೂ.23 ರಿಂದ ಯಾತ್ರಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಆಷಾಢ ಪೂರ್ಣಿಮೆಯ ದಿನದಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಜಿಸಿ ಮುರ್ಮು ಅಮರನಾಥ ಗುಹೆಯಲ್ಲಿ ಪ್ರಥಮ ಆರತಿಯನ್ನು ನೆರವೇರಿಸಿದರು.
Click this button or press Ctrl+G to toggle between Kannada and English