ನಕ್ಸಲ್ ಪೀಡಿತ ಬೆಳ್ತಂಗಡಿ ಗ್ರಾಮದ ಕೊರಗ ಕಾಲೋನಿಯಲ್ಲಿ ಡೆಂಗ್ಯೂ ಹಾಗೂ ಜ್ವರದ ಭೀತಿ

12:02 PM, Wednesday, July 8th, 2020
Share
1 Star2 Stars3 Stars4 Stars5 Stars
(No Ratings Yet)
Loading...

sulkeri gp ಬೆಳ್ತಂಗಡಿ  : ನಕ್ಸಲ್ ಪೀಡಿತ ಗ್ರಾಮವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಗೆ ಜನರು ಹೋಗುವುದೆಂದರೆ ಅದು ಸಾಹಸ, ಅದರಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹಗ್ಗದ ಸೇತುವೆ ದಾಟಿ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಗಳು ವಾಸಿಸುತ್ತಿವೆ. ಇಲ್ಲಿರುವ  ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ.

ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ  ಅಲ್ಲಿನ ಜನರಿಗೆ ಬರುವುದು ಅಸಾಧ್ಯವಾಗಿರೋದ್ರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ ಭಾಗಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಕಾರ್ಯಕರ್ತೆ ಯರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೊರೊನಾದ ಮಹಾ ಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.  ಕುಗ್ರಾಮಗಳಿಗೆ ಪ್ರತಿನಿತ್ಯ ನೂರಾರು ಅಡೆತಡೆಗಳನ್ನು ಎದುರಿಸಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

sulkeri gp

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English