ನಕ್ಸಲ್ ಪೀಡಿತ ಬೆಳ್ತಂಗಡಿ ಗ್ರಾಮದ ಕೊರಗ ಕಾಲೋನಿಯಲ್ಲಿ ಡೆಂಗ್ಯೂ ಹಾಗೂ ಜ್ವರದ ಭೀತಿ

Wednesday, July 8th, 2020
sulkeri gp

ಬೆಳ್ತಂಗಡಿ  : ನಕ್ಸಲ್ ಪೀಡಿತ ಗ್ರಾಮವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಗೆ ಜನರು ಹೋಗುವುದೆಂದರೆ ಅದು ಸಾಹಸ, ಅದರಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹಗ್ಗದ ಸೇತುವೆ ದಾಟಿ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಗಳು ವಾಸಿಸುತ್ತಿವೆ. ಇಲ್ಲಿರುವ  ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ  ಅಲ್ಲಿನ ಜನರಿಗೆ ಬರುವುದು ಅಸಾಧ್ಯವಾಗಿರೋದ್ರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ […]

ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯಗೆ ನಕ್ಸಲ್​ ಜೊತೆ ಸಂಬಂಧ ಇರುವುದು ಸಾಬೀತಾಗಿದೆ : ಸಿಎಂ ಬಿ.ಎಸ್.ಯಡಿಯೂರಪ್ಪ

Friday, February 21st, 2020
bsy

ಮೈಸೂರು : ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿರುದ್ಧ ರಾಜ್ಯದೆಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅಮೂಲ್ಯ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಮೂಲ್ಯ ತಂದೆ ಆಕೆಯ ಕೈ-ಕಾಲು ಮುರಿಯಿರಿ ಎಂದು ಹೇಳಿದ್ದಾರೆ. ಜೊತೆಗೆ ಅವಳ ರಕ್ಷಣೆಗೂ ಹೋಗಲ್ಲ ಎಂದಿದ್ದಾರೆ. ಆಕೆಯ ಹಿಂದಿರುವ ಸಂಘಟನೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದರೆ ಇದು ಕೊನೆಯಾಗಲ್ಲ,” ಎಂದರು. “ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇರುವುದು ಸಾಬೀತಾಗಿದೆ. ಶಾಂತಿ ಸುವ್ಯವಸ್ಥೆ […]

ನಕ್ಸಲ್ ತಂಡ ಪತ್ತೆ, ಪೊಲೀಸರಿಂದ ಕೂಂಬಿಕ್ ಕಾರ್ಯಾಚರಣೆ

Tuesday, January 16th, 2018
naksalate

ಮಂಗಳೂರು: ದಕ್ಷಿಣಕನ್ನಡ ಕಾಡಂಚಿನಲ್ಲಿ ಮತ್ತೆ ನಕ್ಸಲರ ಪ್ರತ್ಯಕ್ಷರಾಗಿದ್ದಾರೆ. ನಿನ್ನೆ ಪುತ್ತೂರು ತಾಲೂಕಿನ ಅಡ್ಡಹೊಳೆ ಎಂಬಲ್ಲಿ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಪತ್ತೆಯಾಗಿದೆ.ಈ ಹಿಂದೆ ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮಹಾರಾಷ್ಟ್ರದಲ್ಲಿ 5 ಮಹಿಳೆಯರು ಸೇರಿದಂತೆ 7 ನಕ್ಸಲರ ಹತ್ಯೆ ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ತಂಡ ಹಾಗೂ ಎಎನ್ ಎಫ್ ತಂಡ ಅಡ್ಡಹೊಳೆ ಪ್ರದೇಶಕ್ಕೆ ತೆರಳಿ ತನಿಖೆ ಆರಂಭಿಸಿವೆ. […]

ಬಾಲಕೃಷ್ಣ ಶಿಬಾರ್ಲ ಪ.ಗೋ.ಪ್ರಶಸ್ತಿಗೆ ಆಯ್ಕೆ

Thursday, April 2nd, 2015
Balakrishna Sibarla

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2014 ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ವಿಜಯಕರ್ನಾಟಕ ಪತ್ರಿಕೆಯ ಉಡುಪಿಯ ವರದಿಗಾರ ಬಾಲಕೃಷ್ಣ ಶಿಬಾರ್ಲ ಆಯ್ಕೆಯಾಗಿದ್ದಾರೆ. 2014 ರ ಜುಲೈ 31 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನಕ್ಸಲ್, ಪೊಲೀಸ್ ಮಧ್ಯೆ ನಲುಗಿದವರು ಅವರ ಈ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ 7ರಂದು ಮಂಗಳವಾರ ಬೆಳಗ್ಗೆ 10.45 ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಯು ರೂ.10,001/ […]

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರ ಹೆಜ್ಜೆಗುರುತು

Saturday, November 9th, 2013
Belthangady

ಬೆಳ್ತಂಗಡಿ :  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರಿನಲ್ಲಿ ರಾಮಚಂದ್ರ ಭಟ್‌ ಎಂಬುವವರ ಮನೆಗೆ ಭೇಟಿ ನೀಡಿದ ನಕ್ಸಲರ ತಂಡವು ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಇಂದು ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ನಡೆದಿದೆ. ಪಂಚಾಯತ್‌ ಸದಸ್ಯರಾಗಿರುವ ರಾಮಚಂದ್ರ ಭಟ್‌ ಅವರು ಪೊಲೀಸ್‌ ಮಾಹಿತಿದಾರರೆಂಬ ಶಂಕೆಯಲ್ಲಿ ನಕ್ಸಲರು ಈ ಕೃತ್ಯ ಎಸಗಿರಬೇಕೆಂದು ಅನುಮಾನಿಸಲಾಗುತ್ತಿದೆ. ಮನೆ ಆವರಣವನ್ನು ಪ್ರವೇಶಿಸಿದ ಸುಮಾರು 10 – 20 ಜನರಷ್ಟಿದ್ದ ಶಸ್ತ್ರಸಜ್ಜಿತ […]

ಬೆಳ್ತಂಗಡಿಯಲ್ಲಿ ನಕ್ಸಲರೂ ಮಕ್ಕಳಾಟಿಕೆಯಾದರೂ

Tuesday, December 11th, 2012
Chaarmaadi

ಮಂಗಳೂರು :ಮನೆಯಿಂದ ಪರಾರಿಯಾಗಿದ್ದ ಬಾಲಕರಿಬ್ಬರು ಕಾಡಿನಲ್ಲಿ ದಿನಬಳಕೆ ವಸ್ತುಗಳನ್ನು ಶೇಖರಿಸಿಟ್ಟಿದ್ದು ಎಎನ್ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಚಾರ್ಮಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿತ್ತು. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ […]

ಮಕ್ಕಳಾಟಿಕೆ ಸೃಷ್ಟಿಸಿದ ನಕ್ಸಲ್ ಪ್ರಸಂಗ

Thursday, November 29th, 2012
Boys in forest

ಬೆಳ್ತಂಗಡಿ :ಚಾರ್ಮಾಡಿಯಲ್ಲಿ ಎಎನ್‌ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಬಾಲಕರಿಬ್ಬರು ಕಾಡಿನಲ್ಲಿ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಬುಧವಾರ ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ನಡೆದಿದೆ. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಮಂಗಳವಾರ ರಾತ್ರಿ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬುಧವಾರ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ ಪೇಟೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ […]