ಎಂಟು ಜನ ಗಾಂಜಾ ವ್ಯಸನಿಗಳ ತಂಡದಿಂದ ಯುವಕರ ಮೇಲೆ ತಲವಾರು ಹಲ್ಲೆ

1:09 PM, Tuesday, July 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bajilakeri Gangwarಮಂಗಳೂರು : ನಗರದ ಬಜಿಲಕೇರಿಯಲ್ಲಿ ಜುಲೈ 13 ರ ಸೋಮವಾರ ತಡರಾತ್ರಿ  ಸುಮಾರು ಎಂಟು ಜನರ ತಂಡವೊಂದು ಯುವಕನ ಮೇಲೆ ದಾಳಿ ಮಾಡಿದೆ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಗಾಯಗೊಂಡ ಮೂವರು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಗ್ಯಾಂಗ್ ಕೃತ್ಯ ನಡೆಸಿದ್ದ ಸ್ಥಳದಲ್ಲಿನ ಮನೆ ಮುಂದಿನ ವಸ್ತುಗಳನ್ನು ಹಾನಿಗೊಳಿಸಿದೆ.

ಯುವಕರು ಗಾಂಜಾ ವ್ಯಸನಿಗಳಿಗೆ  ಈ ಬಗ್ಗೆ ಕೆಲ ದಿನಗಳ ಹಿಂದೆ ಎಚ್ಚರಿಸಿದ್ದಕ್ಕೆ ಈ ರೀತಿ ಪ್ರತಿಕಾರ ತೀರಿಸಿದೆ ಎನ್ನಲಾಗಿದೆ.

ಸಧ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರದೇಶದಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಹಳೆ ದ್ವೇಷದ ಹಿನ್ನೆಲೆ ಗಾಂಜಾ ಸೇವಿಸಿದ್ದ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English