ನಿತ್ಯ ಸಂಚಾರ
ಗೇಣುದ್ದ ಹೊಟ್ಟೆಗಾಗಿ
ದಣಿವಿಲ್ಲದೆ. 1)
ಕಾರ್ಮಿಕ ಬಲ
ಬಾನೆತ್ತರ ಕಟ್ಟಡ
ಹರಿದ ಗೋಣಿ. 2)
ಕಪ್ಪನೆ ಮೋಡ
ಬಿರುಗಾಳಿ ಎಬ್ಬಿಸಿ
ತಲ್ಲಣಿಸಿತು. 3)
ಪುಸ್ತಕ ಸ್ಪರ್ಶ
ಮನಸ್ಸಿಗೆ ಆಹ್ಲಾದ
ಬಾಳು ಸಿಂಗಾರ. 4)
ಮಿಥ್ಯದ ಮಧ್ಯೆ
ಸತ್ಯ ನರಳುತ್ತಿದೆ
ಕಂಡು ಕಾಣದೆ. 5)
ಸೇಂದಿ ಶರಾಬು
ಗಂಡನ – ಕಾರುಬಾರು
ಗಲ್ಲಿಯ ತುಂಬಾ. 6)
ದೀನನ ಬಾಳು
ಗೇಣುದ್ದ ಹೊಟ್ಟೆಗಾಗಿ
ಮಿಡಿಯುತಿದೆ. 7)
ಮುಂಬೈ ನಗರ
ಬಾನೆತ್ತರ ಕಟ್ಟಡ
ತ್ಯಾಜ್ಯ ಆಗರ. 8)
ಚಂಡ ಅಶೋಕ
ಏಕ ಕಾಳಗ ಗೈದ
ಶಾಂತಿ ಸಾಮ್ರಾಟ. 9)
ಸಂಸಾರಗಳು
ಸಂದೇಹದ ಗೂಡಾಗಿ
ಬದುಕು ಘೋರ. 10)
Click this button or press Ctrl+G to toggle between Kannada and English