ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ಅವ್ಯಹಾರ, ಆರೋಪಿತರಿಗೆ ಜಾಮೀನು

7:57 PM, Sunday, July 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kateelu ಮೂಡಬಿದ್ರೆ  : ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆಯುತ್ತಿದೆ, ವಿಶೇಷ ಪೂಜೆ, ಯಕ್ಷಗಾನ ಮೇಳದ ಹೆಸರಲ್ಲಿ ಹಣ ವಸೂಲಿ,  ಚಿನ್ನದ ರಥ ಸೇವೆಗೆ ಹಣ ವಸೂಲಿ, ಚಂಡಿಕಾ ಯಾಗ.  ಹೋಮದ  ಹೆಸರಲ್ಲಿ ಹಣ ವಸೂಲಿ ನೆಡೆಯುತ್ತಿದೆ ಎಂದು  ಅಲ್ಲದೆ ಸಾರ್ವಜನಿಕರ ದುಡ್ಡು ದೇವರ ಹೆಸರಲ್ಲಿ ಅಸ್ರಣ್ಣ ಕುಟುಂಬದ ಮನೆ ಸೇರುತ್ತದೆ.  ಸರಕಾರೀ ದೇವಸ್ಥಾನದಲ್ಲಿ ವಸೂಲಿ ಒಂದು ಕಡೆಯಾದರೆ ಅದಕ್ಕೆ ರಶೀದಿ ಬೇರೆಯೇ ತೋರಿಸಲಾಗುತ್ತಿತ್ತು ಎಂದು ತನಿಖಾ ವರದಿ ಮಾಡಲಾಗಿತ್ತು. ಈ ಬಗ್ಗೆ ಅಸ್ರಣ್ಣ ಕುಟುಂಬಸ್ಥರು ನ್ಯಾಯಾಲಯದಲ್ಲಿ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದಾರೆ. ಅಲ್ಲದೆ  ಮುಲ್ಕಿ ಪೋಲಿಸ್ ಠಾಣೆ ಮತ್ತು ಬಜ್ಪೆ ಪೋಲಿಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿತ್ತು,  ಈ  ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಇದೀಗ ಆರೋಪಿತರಿಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.

ಕಟೀಲು ದೇವಸ್ಥಾನದ ಆಡಳಿತ ವೈಫಲ್ಯ ಮತ್ತು ಅಸ್ರಣ್ಣ ಕುಟುಂಬಿಕರು ಹಣ ಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಯುಟ್ಯುಬ್ ಹಾಗು ಚಾನೆಲ್ ಮುಖಾಂತರ ಪ್ರಸಾರ ಮಾಡಿ ಕಟೀಲು ದೇವಸ್ಥಾನದಲ್ಲಿ ಸಾರ್ವಜನಿಕರ ದುಡ್ಡು ಯಾವ ರೀತಿ ದುರುಪಯೋಗ ಆಗುತ್ತಿದೆ ಎನ್ನುವುದನ್ನು ತಿಳಿಸಿರುವುದು ಕಟೀಲು ದೇವಸ್ಥಾನದ ಪ್ರಖ್ಯಾತಿ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತಂದಿದೆ  ಎಂದು ಆರೋಪಿಸಿ ವಸಂತ ಗಿಳಿಯಾರ್, ಸಂಜೀವ ಮಡಿವಾಳ ಮತ್ತು ಅನಂತರಾವ್‌ ರವರ ಮೇಲೆ  ರಾಜೇಶ್ ಕೊಟ್ಟಾರಿ, ಗಣೇಶ್ ಶೆಟ್ಟಿ ಮತ್ತು ಕಡಂದಲೆಯ ಸ್ಕಂದ ಪ್ರಸಾದ್ ಭಟ್ ಎಂಬವರು ದೂರು ದಾಖಲಿಸಿದ್ದರು.

ಈ ಜಾಮೀನು ಅರ್ಜಿಗೆ ಸಂಬಂಧಿಸಿ ವಾದ ಪ್ರತಿವಾದವನ್ನು ಆಲಿಸಿದ ಮೂಡಬಿದ್ರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ ಕುಮಾರ್ ರವರು ಈ ವರದಿಯಲ್ಲಿ ಯಾವುದೇ ಭಕ್ತಾಧಿಗಳ ಧಾರ್ಮಿಕ ಭಾವನೆಗೆ ದಕ್ಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲವೆಂದು ಪರಿಗಣಿಸಿ ಎರಡೂ ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನಿಗೆ ಆದೇಶಿಸಿದ್ದಾರೆ

ಆರೋಪಿತರ ಪರವಾಗಿ ಉಡುಪಿಯ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ. ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English