ಬೆಳ್ತಂಗಡಿ : ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರನ್ನ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಳ್ತಂಗಡಿಯ ಸುರ್ಯಪಡ್ಪು ಎಂಬಲ್ಲಿ ನಡೆದಿದೆ ನಡೆದಿದೆ.
ಆಟೋ ಚಾಲಕ ರಾಜೇಶ್ ಎಂಬವ ಮನೆಯಲ್ಲಿ ಗೋವುಗಳನ್ನು ಸಾಕಿ ಅವುಗಳನ್ನು ಕಸಾಯಿ ಖಾನೆಗೆ ಮಾರುತ್ತಿದ್ದರು. ಇಂದು ಸಹ ರಾಜೇಶ್ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ, ಎರಡು ಕರುವನ್ನು ಅಮಾನುಷವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದರು. ಗೋವುಗಳನ್ನು ಪಿಕಪ್ ವಾಹನದಲ್ಲಿ ಕಳುಹಿಸಿ ರಾಜೇಶ್ ಮತ್ತು ಆತನ ಸಹಚರರು ಬೆಂಗಾವಲು ವಾಹನ ಆಲ್ಟೋ ಕಾರಿನಲ್ಲಿಹೋಗುತ್ತಿದ್ದರು.
ಸಂಪೂರ್ಣ ಲಾಕ್ ಡೌನ್ ವೇಳೆ ವಾಹನ ಸಂಚಾರಕ್ಕೆ ಅನುಮತಿ ಇಲದೆ ಇದ್ದುದರಿಂದ ತುರ್ತು ಸೇವೆಗಳ ಪಾಸ್ ಪಡೆದು ಪಿಕಪ್ ವಾಹನ ದಲ್ಲಿ ಈ ತಂಡ ದನ ಸಾಗಾಟದ ವ್ಯಹಾರ ಮಾಡುತ್ತಿತ್ತು.
ಅವರದ್ದೇ ಮತ್ತೊಂದು ತಂಡ ಕಸಾಯಿಖಾನೆಗೆ ದನವನ್ನು ಪಿಕಪ್ ವಾಹನ ದಲ್ಲಿ ಮತ್ತು ಬೆಂಗಾವಲು ಕಾರಲ್ಲಿ ಹೋಗುತ್ತಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದ್ದು, ಅವರನ್ನ ಬೆನ್ನಟ್ಟಿ ಹಿಡಿಯಲು ಗುರುವಾಯನಕೆರೆ ಬಳಿ ಹೋದಾಗ ಇಬ್ಬರು ಬಜರಂಗದಳ ಕಾರ್ಯಕರ್ತರ ಮೇಲೆಯೇ ಮಾರಣಾಂತಿಕ ದಾಳಿ ಮಾಡಿದ್ದಾರೆ. ಇದರಿಂದ ಗುರು ಮತ್ತು ನಿತೀಶ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಮಯದಲ್ಲಿ ಇಬ್ಬರು ಬಜರಂಗದಳ ಕಾರ್ಯಕರ್ತರ ಎರಡು ಮೊಬೈಲ್, ನಗ ನಗದು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.
ಪಿಕಪ್ ವಾಹನ ಮಂಗಳೂರಿನ ಕರೀಂ ಎಂಬವರಿಗೆ ಸೇರಿದ್ದಾಗಿದೆ, ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಪಾಸ್ ಪಡೆದು ಗ್ರಾಮೀಣ ಭಾಗಗಳಿಂದ ಗೋ ಕಳವು ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ಆಟೋ ಚಾಲಕ ರಾಜೇಶ್ ಮತ್ತು ಆತನ ಹಿಂದೆ ಗೋ ಕಳ್ಳತನದ ದೊಡ್ಡ ಜಾಲವೇ ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.
Click this button or press Ctrl+G to toggle between Kannada and English