ಮುಸುಕುಹಾಕಿ ಕಾರಿನಲ್ಲಿ ಬಂದು ಗೋವುಗಳ ಕಳ್ಳತನಕ್ಕೆ ಯತ್ನಿಸಿದ ತಂಡ

Sunday, March 27th, 2022
Cow Thief

ಕಡಬ : ಮಲಗಿದ್ದ ಗೋವುಗಳನ್ನು ಮುಸುಕುಧಾರಿ ತಂಡವೊಂದು ಕಳ್ಳತನಕ್ಕೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದ ಆಂಜನೇಯ ಗುಡಿ ಬಳಿ ಈ ಘಟನೆ ನಡೆದಿದ್ದು, ಮಾ.25ರಂದು ಸಿಸಿ ಕೆಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಲಗಿದ್ದ ಗೋವನ್ನು ಕಾರಿನಲ್ಲಿ ಬಂದ ತಂಡ ಹಿಡಿಯಲು ಯತ್ನಿಸಿದ್ದು, ಗೋವು ತಪ್ಪಿಸಿಕೊಂಡಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿರುವ ಕೆಲವು ದೃಶ್ಯ ವೈರಲ್‌ ಆಗಿದೆ.

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಸಲು ವಿಹೆಚ್ ಪಿ ಮನವಿ

Friday, September 3rd, 2021
cow

ಮಂಗಳೂರು  : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಸೂಚನೆಗೆ ಸ್ವಾಗತಿಸುತ್ತೇವೆ ಎಂದು  ವಿಶ್ವ ಹಿಂದು ಪರಿಷತ್ ಹೇಳಿದೆ. ಗೋಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಅಲಹಾಬಾದ್ ಹೈಕೋರ್ಟ್ ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದೆ ಅಲ್ಲದೆ ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯಾದಾಗ ಇಡೀ ದೇಶ ದುರ್ಭಲವಾಗುತ್ತದೆ. […]

ಬಕ್ರೀದ್​​ ಹಬ್ಬದಂದು ಗೋಹತ್ಯೆ ನಿಲ್ಲಿಸುವಂತೆ ಮುತಾಲಿಕ್​ ಮನವಿ

Friday, July 24th, 2020
pramodMuthalik

ಧಾರವಾಡ : ಬಕ್ರೀದ್ ಹಬ್ಬದಂದು ಗೋಹತ್ಯೆ ನಿಲ್ಲಿಸುವಂತೆ ಆಗ್ರಹಿಸಿ ಶ್ರೀರಾಮಸೇನಾ ವತಿಯಿಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ರಮವಾಗಿ ಗೋವುಗಳ ಮಾರಾಟ, ಸಾಗಾಣಿಕೆ ಹಾಗೂ ಅವುಗಳ ಕಳ್ಳತನ ನಡೆಯುತ್ತಿದೆ. ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ಯಥೇಚ್ಛವಾಗಿ ನಡೆಯುತ್ತಿದೆ. ಗೋವುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಿದೆ, ಸರ್ಕಾರವೂ ಸಹ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳಿಗೆ ಮನವಿ […]

ತುರ್ತುಸೇವೆ ಪಾಸ್ ಪಡೆದು ಪಿಕಪ್ ವಾಹನ ದಲ್ಲಿ ಅಕ್ರಮ ದನ ಸಾಗಾಟ, ತಡೆದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ

Monday, July 20th, 2020
cow smuggler

ಬೆಳ್ತಂಗಡಿ : ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರನ್ನ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಳ್ತಂಗಡಿಯ ಸುರ್ಯಪಡ್ಪು ಎಂಬಲ್ಲಿ ನಡೆದಿದೆ ನಡೆದಿದೆ. ಆಟೋ ಚಾಲಕ ರಾಜೇಶ್ ಎಂಬವ ಮನೆಯಲ್ಲಿ ಗೋವುಗಳನ್ನು ಸಾಕಿ  ಅವುಗಳನ್ನು ಕಸಾಯಿ ಖಾನೆಗೆ ಮಾರುತ್ತಿದ್ದರು. ಇಂದು ಸಹ  ರಾಜೇಶ್ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ, ಎರಡು ಕರುವನ್ನು ಅಮಾನುಷವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದರು. ಗೋವುಗಳನ್ನು ಪಿಕಪ್ ವಾಹನದಲ್ಲಿ ಕಳುಹಿಸಿ ರಾಜೇಶ್ ಮತ್ತು ಆತನ ಸಹಚರರು ಬೆಂಗಾವಲು ವಾಹನ ಆಲ್ಟೋ ಕಾರಿನಲ್ಲಿಹೋಗುತ್ತಿದ್ದರು. ಸಂಪೂರ್ಣ ಲಾಕ್ ಡೌನ್ ವೇಳೆ […]

ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಿ : ಡಾ. ವೀರೇಂದ್ರ ಹೆಗ್ಗಡೆ ಕರೆ

Saturday, March 7th, 2020
veerendra-heggade

ಮಂಗಳೂರು : ಇಂದು ಜನರು ಪತ್ರಿಕೆಗಳನ್ನು ಓದುವ ಜತೆಗೆ ವಿಷಯಗಳ ಸೂಕ್ಷ್ಮತೆಗಳನ್ನು ತಿಳಿದು ವಿಮರ್ಶಿಸುವ ಪ್ರಜ್ಞಾವಂತಿಕೆ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ವರದಿಗಳನ್ನು ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಮಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಧ್ಯಮಗಳು ಇಂದು ಗೋವಿನಂತಾಗಬೇಕು. ಗೋವು ಏನೇ ತಿಂದರೂ ಅದನ್ನು […]

ಬಂಟ್ವಾಳ : ಗೋವು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Saturday, December 14th, 2019
bantwal

ಬಂಟ್ವಾಳ : ಜಾನುವಾರುಗಳ ಕಳವು ಪ್ರಕರಣದ ಆರೋಪದ ಮೇರೆಗೆ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿ ನಜಾದುದ್ದೀನ್ ಹಾಗೂ ಅರ್ಕುಳ ಗ್ರಾಮದ ಅಬ್ದುಲ್ ಸಲಾಂ ಬಂಧಿತ ಆರೋಪಿಗಳು. ನವೆಂಬರ್ 28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡುವಿನಲ್ಲಿ ಸಜೀಪದಿಂದ ಕಂಚಿನಡ್ಕಕ್ಕೆ ತೆರಳುವ ರಸ್ತೆಯಲ್ಲಿ ದನಗಳ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು […]

ವಿಟ್ಲ : ಗೋವುಗಳ ಅಕ್ರಮ ಸಾಗಾಟದ ಆರೋಪ; ಓರ್ವ ಬಂಧನ

Thursday, October 24th, 2019
govugalu

ವಿಟ್ಲ : ಗೋವುಗಳ ಅಕ್ರಮ ಸಾಗಾಟ ಆರೋಪದ ಮೇರೆಗೆ ವಾಹನ ಸಹಿತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಸಮೀಪದ ಮುಂಡತ್ತಜೆ ಎಂಬಲ್ಲಿ ಗುರುವಾರ ನಡೆದಿದೆ. ಸಾಲೆತ್ತೂರು ಕಟ್ಟೆ ನಿವಾಸಿ ಇಸ್ಮಾನ್ ಶಾಫಿ ಎಂಬಾತನನ್ನು ಹಾಗು ಎರಡು ದನಗಳು, ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗಾಟದ ವೇಳೆ ವಾಹನಕ್ಕೆ ಬೆಂಗವಲಾಗಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.    

ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು : ಜೀತೆಂದ್ರ ಕೊಟ್ಟಾರಿ

Thursday, July 11th, 2013
VHP Jeetendra Kottari

ಮಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದೆ.   ಮೂಡಬಿದಿರೆಯ ಜೈನ ಬಸದಿಯಲ್ಲಿ ಕಳ್ಳತನವಾಗಿರುವ ವಿಗ್ರಹಗಳನ್ನು ಮತ್ತು ಗೋ ಕಳ್ಳರನ್ನು ಬಂಧಿಸಬೇಕು. 4 ದಿನದ ಒಳಗೆ ಅಪರಾಧಿಗಳ ಬಂಧನವಾಗದಿದ್ದಲ್ಲಿ  ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಚಾರ ಸಮಿತಿಯ ಅಧ್ಯಕ್ಷ  ಜೀತೆಂದ್ರ ಕೊಟ್ಟಾರಿ ಹೇಳಿದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಉಳ್ಳಾಲದಲ್ಲಿ ದನವನ್ನು ಕದ್ದು ಅದರ ಗೊರಸನ್ನು ಮನೆಯ […]