ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು : ಜೀತೆಂದ್ರ ಕೊಟ್ಟಾರಿ

12:00 PM, Thursday, July 11th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

VHP Jeetendra Kottariಮಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದೆ.   ಮೂಡಬಿದಿರೆಯ ಜೈನ ಬಸದಿಯಲ್ಲಿ ಕಳ್ಳತನವಾಗಿರುವ ವಿಗ್ರಹಗಳನ್ನು ಮತ್ತು ಗೋ ಕಳ್ಳರನ್ನು ಬಂಧಿಸಬೇಕು. 4 ದಿನದ ಒಳಗೆ ಅಪರಾಧಿಗಳ ಬಂಧನವಾಗದಿದ್ದಲ್ಲಿ  ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಚಾರ ಸಮಿತಿಯ ಅಧ್ಯಕ್ಷ  ಜೀತೆಂದ್ರ ಕೊಟ್ಟಾರಿ ಹೇಳಿದರು.

ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಉಳ್ಳಾಲದಲ್ಲಿ ದನವನ್ನು ಕದ್ದು ಅದರ ಗೊರಸನ್ನು ಮನೆಯ ಅಂಗಳದಲ್ಲಿ ಇಡಲಾಗಿತ್ತು. ಇಂತಹ ಪ್ರಕರಣಗಳಿಂದ ಸಮಾಜದಲ್ಲಿ ಕೋಮು ಸೌಹಾರ್ದತೆ ನಾಶವಾಗುವ ಸಾಧ್ಯತೆಯಿದೆ. ಈ ಬಗ್ಗೆ ಕಾನೂನು ಹೋರಾಟದೊಂದಿಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು  ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಹಿಂಪ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಪ್ರದೀಪ್ ಪಂಪ್ ವೆಲ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English