ಗದಗ : ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಅರಣ್ಯೇತರ ಮತ್ತು ಖಾಸಗೀ ಜಮೀನುಗಳಲ್ಲಿ ಬಿದಿರು ನೆಡುತೋಪು ಬೆಳೆಸಲು ಅವಕಾಶ ಇದ್ದು ಗದಗ ಜಿಲ್ಲೆಯ ಆಸಕ್ತಿಯುಳ್ಳ ರೈತರು ಎನಬಿಎಂ ಡಾಟ್ ಎನೈಸಿ ಡಾಟ ಇನ್ ವೆಬಸೈಟನಲ್ಲಿ ನೋಂದಣಿ ಮಾಡಿಕೊಳ್ಳಲು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ ಮತ್ತು ಜಮೀನು ಇರುವವರ ಆದಾಯ ಹೆಚ್ಚಿಸುವ, ವಾತಾವರಣದ ಬದಲಾವಣೆಗೆ ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತು ಪೂರೈಕೆಗೆ ಪೂರಕವಾದ ರಾಷ್ಟಿಯ ಬಿದಿರು ಮಿಶನ್ ಯೋಜನೆಯನ್ನು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ, ಸಹಕಾರ ಇಲಾಖೆಗಳು ಅರಣ್ಯ ಇಲಾಖೆ ಮೂಲಕ ಜಾರಿಗೊಳಿಸಿವೆ. ಹೆಚ್ಚಿನ ಮಾಹಿತಿಗೆ ಬಿಂಕದಕಟ್ಟಿ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.
Click this button or press Ctrl+G to toggle between Kannada and English