ಉಡುಪಿ: ಕಲರ್ಸ್ ಕನ್ನಡದ ಕಿನ್ನರಿಯಲ್ಲಿ ನಾಯಕಿ ನಟಿಯಾಗಿದ್ದ ಬೈಂದೂರಿನ ಭೂಮಿ ಶೆಟ್ಟಿ ಈಗ ಭತ್ತದ ಗದ್ದೆಗೆ ಗೊಬ್ಬರ ಹೊತ್ತು, ನಾಟಿ ಮಾಡಿ ಬೆಳಗ್ಗಿನಿಂದ ಸಂಜೆವರೆಗೂ ಬೆವರು ಸುರಿಸಿ ದುಡಿಯುತ್ತಿದ್ದಾರೆ.
ಕಿರುತೆರೆಯಲ್ಲಿ ಖ್ಯಾತಿಗಳಿಸಿ, ಬಿಗ್ಬಾಸ್ ಸೀಸನ್ 7ರಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಹುಡುಗಿ ಭೂಮಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯವರು.
ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ ಇದ್ದ ಅವರಿಗೆ ಸಾಧ್ಯ ಈ ಪರಿಸ್ಥಿತಿ ಬಂದಿದೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸಹವಾಸವೇ ಬೇಡ ಎಂದು ಬೈಂದೂರಿನ ಅಜ್ಜನ ಮನೆಗೆ ಬಂದು ದನದ ಹತ್ತಿಯಿಂದ ಗೊಬ್ಬರ ಹೊತ್ತುಗದ್ದೆಗೆ ಹಾಕುತ್ತಿದ್ದಾರೆ.
ಕಿರುತೆರೆ ನಟಿ ಯಾಕಪ್ಪ ಈ ಸ್ಥಿತಿ ಬಂತು ಎಂದು ನೀವು ಅಂದುಕೊಂಡಿದ್ದೀರಾ. ಹೌದು ಊರಲ್ಲೇ ಇದ್ದು, ಸುಮ್ನೆ ಕಾಲ ಕಳೆಯುವ ಬದಲು ಅಜ್ಜನ ಭತ್ತದ ಗದ್ದೆಯಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಗೊಬ್ಬರ ಹೊತ್ತು, ನಾಟಿ ಮಾಡಿ ಮಾಡ್ತಿದ್ದಾರಂತೆ.
ಭೂಮಿ ಶೆಟ್ಟಿ ಅವರ ಅಜ್ಜ ಭತ್ತದ ಬೇಸಾಯ ಮಾಡುತ್ತಿದ್ದ ಭೂಮಿ ಈ ಬಾರಿ ಬೇಸಾಯ ಮಾಡುವುದು ಬೇಡ ಎಂದು ನಿರ್ಧಾರ ಮಾಡಿದ್ದರಂತೆ. ಆದ್ರೆ ನಾವೆಲ್ಲರೂ ಮನೆಯಲ್ಲೇ ಇದ್ದು ಯಾಕೆ ವ್ಯವಸಾಯ ಮಾಡಬಾರದು ಅಂತ ಯೋಚನೆ ಬಂದು, ಭೂಮಿ ಶೆಟ್ಟಿ ಅವರೇ ಮುಂದಾಳತ್ವ ವಹಿಸಿ, ಕೃಷಿ ಚಟುವಟಿಕೆ ಮಾಡಿ ಖುಷಿ ಪಡುತ್ತಿದ್ದಾರೆ.
ಕೃಷಿಯಲ್ಲಿ ತೊಡಗಿಸಿಕೊಂಡ ಅಪರೂಪದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸಗೊಂಡಿದ್ದಾರೆ.
Click this button or press Ctrl+G to toggle between Kannada and English