ಸಮುದ್ರ ತೀರಕ್ಕೆ ತೇಲಿ ಬಂದ ಕ್ಷಿಪಣಿ ಮಾದರಿಯ ವಸ್ತು

Tuesday, September 22nd, 2020
misile

ಬೈಂದೂರು: ಶಿರೂರು ಕರಾವಳಿ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ವಸ್ತುವೊಂದು ಮಂಗಳವಾರ ಮುಂಜಾನೆ ತೇಲಿ ಬಂದಿದೆ. ಸುಮಾರು 10ರಿಂದ 15 ಅಡಿ ಉದ್ದದ ಕೆಂಪು ಬಣ್ಣದ ವಸ್ತು ಇದಾಗಿದ್ದು, ಕಬ್ಬಿಣದಿಂದ ತಯಾರಿಸಲಾಗಿದೆ. ಸ್ಥಳೀಯರಿಗೆ ಈ ಕ್ಷಿಪಣಿ ಮಾದರಿಯ ವಸ್ತು ಕುತೂಹಲಕ್ಕೆ ಕಾರಣವಾಗಿದೆ. ಕರಾವಳಿ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

ರಾಜ್ಯ ಸಂಪುಟದಲ್ಲಿ ಸಚಿವ ಪುನರ್‌ ರಚನೆ; ಕೋಟ ಶ್ರೀನಿವಾಸ ಪೂಜಾರಿ ದೆಹಲಿಗೆ

Tuesday, August 18th, 2020
srinivas Poojary

ಮಂಗಳೂರು : ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿಗಳು ಈಗಾಗಲೇ ಶುರುವಾಗಿದೆ. ಏತನ್ಮಧ್ಯೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಿಢೀರನೇ ದೆಹಲಿಗೆ ತೆರಳಿದ್ದಾರೆ. ಪುನರ್‌ ರಚನೆ ಶೀಘ್ರದಲ್ಲೇ ಆಗಲಿದ್ದು ಉಡುಪಿಯಿಂದ ಶಾಸಕ ಸುನೀಲ್‌ ಕುಮಾರ್‌ ಕಾರ್ಕಳ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸುಳ್ಯದ ಎಸ್‌ ಅಂಗಾರ ಈ ಮೂವರ ಪೈಕಿ ಯಾರಿಗಾದರೂ ಇಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಈಗ ಸಚಿವ ಕೋಟ ಶ್ರೀನಿವಾಸ ಅವರು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಉಳಿಸುವ […]

ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೃತ್ಯು

Sunday, August 16th, 2020
boat

ಕುಂದಾಪುರ : ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೊಡೇರಿ ಎಂಬಲ್ಲಿ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ಸಾಗರಶ್ರೀ ಎಂಬ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನಾಗರಾಜ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಶೇಖರ್, ಮಂಜುನಾಥ್ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.  ಒಟ್ಟು 9 ಮಂದಿ ಮೀನುಗಾರರು ತೆರಳಿದ್ದರು. […]

ಕಿನ್ನರಿ ಧಾರಾವಾಹಿಯ ನಟಿ ಭೂಮಿ ಈಗ ಬೈದೂಂರಿನಲ್ಲಿ ಗೊಬ್ಬರ ಹೊರುತ್ತಿದ್ದಾರೆ

Tuesday, July 21st, 2020
bhoomi shetty

ಉಡುಪಿ: ಕಲರ್ಸ್ ಕನ್ನಡದ ಕಿನ್ನರಿಯಲ್ಲಿ ನಾಯಕಿ ನಟಿಯಾಗಿದ್ದ ಬೈಂದೂರಿನ  ಭೂಮಿ ಶೆಟ್ಟಿ ಈಗ ಭತ್ತದ ಗದ್ದೆಗೆ ಗೊಬ್ಬರ ಹೊತ್ತು, ನಾಟಿ ಮಾಡಿ ಬೆಳಗ್ಗಿನಿಂದ ಸಂಜೆವರೆಗೂ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿ, ಬಿಗ್ಬಾಸ್‌ ಸೀಸನ್‌ 7ರಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಹುಡುಗಿ ಭೂಮಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯವರು. ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ  ಇದ್ದ ಅವರಿಗೆ ಸಾಧ್ಯ ಈ ಪರಿಸ್ಥಿತಿ ಬಂದಿದೆ.  ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸಹವಾಸವೇ ಬೇಡ ಎಂದು […]

ಕುಂದಾಪುರ : ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರ ಬಂಧನ; 1.633 ಕೆಜಿ ಚಿನ್ನಾಭರಣ ವಶ

Wednesday, December 18th, 2019
kundapura

ಕುಂದಾಪುರ : ಎರಡು ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳಾದ ಕುಂದಾಪುರ ಹಾಗೂ ಭಟ್ಕಳ ಎಎಸ್ಪಿಗಳ ತಂಡ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಮಂಗಳವಾರ ಬಂಧಿಸಿ 61.47 ಲಕ್ಷ ರೂ. ಮೌಲ್ಯದ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಎರ್ನಾಕುಲಂ ಕಡೆಯಿಂದ ಅಕ್ರಮವಾಗಿ ರೈಲಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಕುಂದಾಪುರ ಎಎಸ್ಪಿ ಹರಿರಾಮ್‌ ಶಂಕರ್‌ ಅವರು ಆರೋಪಿಗಳ ಬೇಟೆಗಾಗಿ ತಂಡ ರಚಿಸಿ ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣ ಗಳಲ್ಲಿ ಕಾದು […]

ಬೈಂದೂರು : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

Friday, November 15th, 2019
Bybdoor

ಬೈಂದೂರು : ಬೈಂದೂರು ಸಮೀಪದ ನಾಗೂರು ಬಳಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರು ತುಂಬಿದ್ದ ಕಂಟೈನರ್ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತಿನಿಂದ ಮಂಗಳೂರಿಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ನಿಂದ ಮಂಗಳೂರಿಗೆ ಬರುತ್ತಿದ್ದ ಕಂಟೈನರ್ ನಲ್ಲಿ ಒಟ್ಟು 32 ಕೋಣಗಳಿದ್ದು, ಅದರಲ್ಲಿ ಒಂದು ಮೃತಪಟ್ಟಿದೆ. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಮಲ್ಲಿಕ್, ಸಮೀರ್, ಸಾಧಿಕ್, ಮಲ್ಲಿಕ್ ಸಾಹಿದ್ ಬಂಧಿತ ಆರೋಪಿಗಳು. ಗುಜರಾತಿನಿಂದ ಮಂಗಳೂರಿಗೆ ಕಂಟೆನರ್ […]

ಬೈಂದೂರು : ನೀರುಪಾಲಾಗಿದ್ದ ಬಾಲಕನ ಶವ ಪತ್ತೆ

Saturday, October 19th, 2019
Ritesh

ಬೈಂದೂರು : ಹಳಗೇರಿಯಲ್ಲಿ ಎಡಮಾವಿನ ಹೊಳೆ ಬೊಬ್ಬರ್ಯಗುಂಡಿ ಎಂಬಲ್ಲಿ ಗುರುವಾರ ನೀರುಪಾಲಾಗಿದ್ದ ಬಾಲಕನ ರಿತೇಶ್ ಮೃತದೇಹ ಅ. 19ರಂದು ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಅರ್ಧವಾರ್ಷಿಕ ರಜೆಯ ಮೋಜಿನಲ್ಲಿದ್ದ ನಾಲ್ವರು ಬಾಲಕರು ಬೊಬ್ಬರ್ಯಗುಂಡಿ ಎಂಬಲ್ಲಿಗೆ ಈಜಲು ತೆರಳಿದ್ದರು. ಈ ಪೈಕಿ ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ ( 12) ನೀರುಪಾಲಾಗಿದ್ದರು. ಈ ಪೈಕಿ ಅಕ್ಟೋಬರ್ 17 ರ ಘಟನೆ ನಡೆದ ದಿನದಂದೇ, ವಂಶಿತ್ ಶವ ಪತ್ತೆಯಾಗಿತ್ತು. ಆದರೆ ರಿತೇಶ್ ಶವ ಪತ್ತೆಯಾಗಿರಲಿಲ್ಲ. ಬಾಲಕನಿಗಾಗಿ ಕಳೆದೆರಡು ದಿನಗಳಿಂದ […]

ಬೈಂದೂರು : ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Thursday, October 17th, 2019
niru-paalu

ಬೈಂದೂರು : ಈಜಲು ತೆರಳಿದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ನಾಗೂರು ಹಳಿಗೇರಿ ನದಿಯಲ್ಲಿ ಗುರುವಾರ ಮದ್ಯಾಹ್ನ ಸಂಭವಿಸಿದೆ. ಮೃತರನ್ನು ನಾಗೂರಿನ ಸಂದೀಪನ್ ಶಾಲೆಯ ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ (12) ಹಾಗೂ ರಿತೇಶ್ ಶೆಟ್ಟಿ (12) ಎಂದು ತಿಳಿದುಬಂದಿದೆ. ನಾಗೂರಿನ ಸಂದೀಪನ್ ಶಾಲೆಯ 9 ಮಂದಿ ವಿದ್ಯಾರ್ಥಿಗಳು ನಾಗೂರಿನ ಕೊಕ್ಕೇಶ್ವರ ದೇವಸ್ಥಾನದ ಬಳಿ ಇರುವ ನದಿ ಬಳಿಗೆ ಹೋಗಿದ್ದಾರೆ, ಈ ಸಂದರ್ಭ ನಾಲ್ವರು ನೀರಿಗೆ ಈಜಲು ಇಳಿದ ಸಂದರ್ಭ ನೀರಿನಲ್ಲಿ ಮುಳುಗಿದ್ದಾರೆ ಇದನ್ನು […]

ಬೈಂದೂರು : ತಾ. ಕೇಂದ್ರದ ನಗರ ವಿನ್ಯಾಸ ಬದಲಾವಣೆ

Wednesday, September 11th, 2019
Baindoor

ಬೈಂದೂರು : ಉಡುಪಿ ಜಿಲ್ಲೆಯ ಉತ್ತರದ ಗಡಿಭಾಗದ ತಾಲೂಕು ಕೇಂದ್ರವಾದ ಬೈಂದೂರು ಪ್ರಗತಿಯ ಇಂದಿನ ನೋಟ ನಗರದ ಚಿತ್ರಣವನ್ನು ಬದಲಿಸಲಿದೆ. ಹಲವು ವರ್ಷಗಳ ಪ್ರಯತ್ನಗಳಿಗೆ ದೊರೆಯುತ್ತಿರುವ ಒಂದೊಂದೇ ಯಶಸ್ಸುಗಳು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿವೆ. ಆದರೆ ಈ ಹಂತದಲ್ಲಿ ಮಾದರಿ ತಾಲೂಕು ರಚನೆಯ ನಿರ್ಮಾಣದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳು ಮಾತ್ರ ಊರಿನ ಭವಿಷ್ಯವನ್ನು ನಿರ್ಧರಿಸಲಿವೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿ ಚಿಂತಕರು ಮುಂದಿನ ದಿನದ ಬದಲಾವಣೆಗಳನ್ನು ಮನಗಂಡು ಬೈಂದೂರಿನ ಬೆಳವಣಿಗೆಯ ವಿನ್ಯಾಸ ರೂಪಿಸಬೇಕಿದೆ. ಬೈಂದೂರು ಅಭಿವೃದ್ಧಿಯಲ್ಲಿ ನಿರಂತರವಾಗಿ ಇಲ್ಲಿನ ಜನಪ್ರತಿನಿಧಿಗಳು […]

ಬೈಂದೂರಿನಲ್ಲಿ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ : ಓರ್ವ ಸಾವು, ಮೂವರು ಗಂಭೀರ

Saturday, August 31st, 2019
car

ಬೈಂದೂರು : ಕಾರುಗಳ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಭಟ್ಕಳದ ಹೋಟೆಲ್ ಉದ್ಯಮಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಕನಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಭಟ್ಕಳದಲ್ಲಿ ಹೋಟೆಲ್ ನಡೆಸುತ್ತಿರುವ ನೂರುಲ್ ಅಮೀನ್(48) ಮೃತಪಟ್ಟವರು.ಇಂದು ಮುಂಜಾನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಅಲ್ಲಿಂದ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನೂರುಲ್ ಅಮೀನ್ ಅವರ ಮಾರುತಿ ಸ್ವಿಪ್ಟ್ ಕಾರು ರಸ್ತೆಯ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಇಯಾನೋ […]