ಬೇಲೂರು : ಸ್ಥಳೀಯ ಪುರಸಭೆ ಅಂಗಳದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಬೀಡಿಯೊಂದರ ನಾಮಫಲಕ ಅಳವಡಿಸಿದ್ದಕ್ಕೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ದೇವಾಲಯಕ್ಕೆ ದೇಣಿಗೆ ಕೊಟ್ಟಿರುವ ದಾನಿಗಳ ಹೆಸರು ಹಾಕಿಸುತ್ತಾರೆ.
ಆದರೆ ಸಾರ್ವಜನಿಕವಾಗಿ ಮತ್ತು ಸಾಮಾಜಿಕವಾಗಿ ಕೆಲವೊಂದು ಸ್ಥಳಗಳಲ್ಲಿ ನಿಷೇಧಿಸಲ್ಪಟ್ಟಿರುವ ಬೀಡಿಯೊಂದರ ಹೆಸರಿನ ನಾಮಫಲಕವನ್ನು ದೇವಾಲಯಕ್ಕೆ ಹಾಕಿರುವುದು ಸರಿಯಲ್ಲ ಎಂಬುದು ಭಕ್ತರ ವಾದವಾಗಿದೆ. ಈ ಬಗ್ಗೆ ದೇವಸ್ಥಾನಕ್ಕೆ ಈ ರೀತಿ ಫಲಕ ಹಾಕಿರುವುದು ಸರಿಯಲ್ಲ ಎಂದು ಭಕ್ತರು ಆಡುವ ಮಾತು. ಈ ಬಗ್ಗೆ ದೇವಾಲಯದ ಕಮೀಟಿಯವರಿಗೆ ಕೇಳಿದಾಗ, ದೇವಾಲಯದ ಹಿಂದಿನ ಅಧ್ಯಕ್ಷರಾಗಿದ್ದ ಶಿವಪ್ಪ ಶೆಟ್ಟಿ ಅವರ ಅವಧಿಯಲ್ಲಿ ಬೀಡಿ ಮಾಲೀಕರು ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡಿದ್ದರು ಎನ್ನುತ್ತಾರೆ. ಹೀಗಾಗಿ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿದ್ದ ಬೀಡಿ ಮಾಲೀಕರಾದ ಸತೀಶ ಅವರ ಹೆಸರನ್ನು ಹಾಕಲಾಗಿದೆ ಎನ್ನುತ್ತಾರೆ. ಅಂದಿನ ಸಮಯದಲ್ಲಿ ಈ ಸಂದರ್ಭದಲ್ಲಿರುವ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿಲ್ಲ. ಈಗ ಕಾನೂನು ತುಂಬಾ ಕಟ್ಟುನಿಟ್ಟಾಗಿದೆ. ಶೀಘ್ರದಲ್ಲಿಯೇ ದೇವಾಲಯದ ಮುಂದಿನ ರಸ್ತೆ ಅಗಲೀಕರಣ ನಡೆಯಲಿದೆ. ಆ ಸಮಯದಲ್ಲಿ ದೇವಾಲಯದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ.
Click this button or press Ctrl+G to toggle between Kannada and English