ಬೆಂಗಳೂರು: ತಮ್ಮ ವಾಟ್ಸ್ ಅಪ್ ಮೂಲಕ ಹಿಂದೂ ದೇವ ದೇವತೆಗಳ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಕ್ಷಮೆಯಾಚಿಸಿದ್ದಾರೆ. ಅವಹೇಳನ ಮಾಡಲಾದ ಸಂದೇಶದ ಸ್ಕ್ರೀನ್ ಶಾಟ್ ನ್ನು ಕೆಲ ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು ವಾಟ್ಸ್ ಅಪ್ ಗ್ರುಪ್ ನಲ್ಲಿ ಪೋಸ್ಟ್ ನೋಡಿ ಗ್ರುಪ್ ನಿಂದ ಎಕ್ಸಿಟ್ ಆಗಿದ್ದಾರೆ. ಮಾಜಿ ಸಚಿವರೂ ಆಗಿರುವ ಶಾಸಕ ನಿರಾಣಿ ಈ ಸಂಬಂಧ ಸಾರ್ವಜನಿಕರ ಕ್ಷಮೆಯಾಚಿಸುವ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಅದಾಗ್ಯೂ ಸಂದೇಶವನ್ನು ನಾನು ಫಾರ್ವರ್ಡ್ ಮಾಡಿಲ್ಲ ಅದನ್ನು ನನ್ನ ವೈಯಕ್ತಿಕ ಸಹಾಯಕ (ಪಿಎ) ಉದ್ದೇಶಪೂರ್ವಕವಾಗಿ ಮಾಡಿರಬಹುದು ಎಂದಿದ್ದಾರೆ.
ಸಾರ್ವಜನಿಕರ ಸಂಪರ್ಕದ ಉದ್ದೇಶಕ್ಕಾಗಿ ನನ್ನ ಪಿಎ ಮತ್ತು ಗನ್ ಮ್ಯಾನ್ ಈ ಮೊಬೈಲ್ ಸಂಖ್ಯೆಯನ್ನು ಬಳಸುತ್ತಾರೆ. ನಿನ್ನೆ ರಾತ್ರಿ ಫೋನ್ ನನ್ನ ಪಿಎ ಜೊತೆಗಿತ್ತು. ನಿರ್ಲಕ್ಷ್ಯದಿಂದಾಗಿ ಎಲ್ಲಿಂದಲೋ ಬಂದ ಸಂದೇಶವು ಫಾರ್ವರ್ಡ್ ಅಗಿದ್ದು ಈ ರೀತಿಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆದರೆ, ಇದು ಉದ್ದೇಶಪೂರ್ವಕವಾಗಿ ಫಾರ್ವರ್ಡ್ ಆದ ಸಂದೇಶವಲ್ಲ. ಆದರೂ ನನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸುತ್ತೇನೆ. ನಾನು ರಾಜ್ಯದ ಜನರಿಗೆ ಕ್ಷಮೆಯಾಚಿಸುತ್ತೇನೆ ಎಂದು ನಿರಾಣಿ ಹೇಳಿದ್ದಾರೆ.
Click this button or press Ctrl+G to toggle between Kannada and English