ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

10:28 PM, Friday, July 31st, 2020
Share
1 Star2 Stars3 Stars4 Stars5 Stars
(No Ratings Yet)
Loading...

Kamalaಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, ಭಾಸ್ಕರ್ ಎಂ ಸಾಲ್ಯಾನ್ ಮತ್ತು ಪ್ರವೀಣ್ ಎಂ ಸಾಲ್ಯಾನ್ ಹಾಗೂ ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಬಿಲ್ಲವರ ಅಸೋಷಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಭಾರತ್ ಬ್ಯಾಂಕಿನ ನಿರ್ದೇಶಕ ಮಂಡಳಿ, ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ವಿ ಅರ್ ಕೋಟ್ಯಾನ್, ಬಿಲ್ಲವ ಚೇಂಬರ್ ಆಫ್ ಕಾರ್ಮರ್ಸಿನ ಅಧ್ಯಕ್ಷರಾದ ಎನ್ ಟಿ ಪೂಜಾರಿ ಮತ್ತು ಇತರ ನಿರ್ದೇಶಕರು, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಡಾ. ರಾಜಶೇಖರ ಕೋಟ್ಯಾನ್, ಶೋಕ ವ್ಯಕ್ತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English