ಮಂಗಳೂರಿಗೆ ಆಗಮಿಸಿದ ಇನ್ನೆರಡು ವಿದೇಶಿ ಪ್ರವಾಸಿ ಹಡಗು

11:51 AM, Tuesday, December 4th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

foreign vessels NMPT ಮಂಗಳೂರು :ಸೋಮವಾರ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಆಗಮಿಸಿವೆ. ಬ್ರಿಟನ್‌ ಮತ್ತು ಅಮೆರಿಕದ ಒಟ್ಟು 1,080ಕ್ಕೂ ಅಧಿಕ ಪ್ರವಾಸಿಗರು ಹಾಗೂ 793 ಸಿಬಂದಿಯನ್ನು ಒಳಗೊಂಡ ಎಂವಿ ಸೀಬೋರ್ನ್ ಒಡಿಸ್ಸಿ ಹಾಗೂ ಎಂ.ವಿ. ಸವೆನ್‌ಸಿಸ್‌ ವೋಗಯರ್ ಹಡಗುಗಳು ಆಗಮಿಸಿದವು. ಕೆಲವು ದಿನಗಳ ಹಿಂದೆ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಬಂದ ಬೆನ್ನಲ್ಲೇ ಈ ಐಷಾರಾಮಿ ಹಡಗುಗಳು ನಿನ್ನೆ ಆಗಮಿಸಿವೆ.

650 ಪ್ರಯಾಣಿಕರು ಮತ್ತು 454 ಸಿಬ್ಬಂದಿ ಹೊತ್ತ ಎಂವಿ ಸೆವೆನ್‌ಸೀಸ್ ವೋಗಯರ್ ಮೂರನೇ ಬಾರಿಗೆ ಮತ್ತು 438 ಪ್ರಯಾಣಿಕರು ಮತ್ತು 339 ಸಿಬ್ಬಂದಿಯನ್ನೊಳಗೊಂಡ ಎಂವಿ ಸೀಬೋರ್ನ್ ಒಡಿಸ್ಸಿ ಹಡಗು ಇದೆ ಮೊದಲ ಬಾರಿಗೆ ಎನ್‌ಎಂಪಿಟಿಗೆ ಆಗಮಿಸಿವೆ.

ಇದರೊಂದಿಗೆ ಈ ವರ್ಷ ಒಟ್ಟು 7 ಹಡಗು ಇಲ್ಲಿಗೆ ಆಗಮಿಸಿದಂತಾಗಿದೆ. ಮುಂದಿನ ಹಡಗು ಡಿಸೆಂಬರ್ 15ರಂದು ಆಗಮಿಸಲಿದ್ದು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲಿದ್ದಾರೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಡಾ. ಪಿ. ತಮಿಳ್‌ವಾನನ್ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English