ಬಟ್ಟೆ ಚೀಲಕ್ಕೆ ಬದಲಾಗಿ ಪರ್ಯಾಯ ಚೀಲ ಒದಗಿಸುವಂತೆ ಸಲಹೆ

12:45 PM, Tuesday, December 4th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Distribution of Cloth Bagsಮಂಗಳೂರು :ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ಉಪಯೋಗ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ನಿಷೇಧವನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಆ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸೋಮವಾರ ನಿರ್ಗಮನ ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ರವರು ನಗರದ ಸ್ಟೇಟ್‌ಬ್ಯಾಂಕ್‌ ಬಳಿ ಇರುವ ಮೀನು ಮಾರುಕಟ್ಟೆಯಲ್ಲಿ ಬಟ್ಟೆ ಚೀಲ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ದ.ಕ.ಜಿಲ್ಲಾಧಿಕಾರಿಗಳು ಮೀನು ಮಾರುಕಟ್ಟೆಗೆ ಇತರ ಅಧಿಕಾರಿಗಳೊಂದಿಗೆ ತೆರಳಿ ಅಲ್ಲಿನ ವ್ಯಾಪಾರಸ್ಥರಿಗೆ ಬಟ್ಟೆ ಕೈ ಚೀಲ ವಿತರಿಸಲು ಮುಂದಾದಾಗ ಪ್ಲಾಸ್ಟಿಕ್ ನಿಷೇಧದ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಮೀನು ಮಾರಾಟ ಮಾಡುವ ಮಹಿಳೆಯರು ಪ್ರತಿಭಟನೆ ಪ್ರಾರಂಭಿಸಿ ಜಿಲ್ಲಾಧಿಕಾರಿಯವರನ್ನು ಹಾಗೂ ಇತರ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಮೀನು ಮಾರಾಟ ಮಹಿಳೆಯರು ಮತ್ತು ಸಾರ್ವಜನಿಕರು ಪ್ಲಾಸ್ಟಿಕ್‌ ಚೀಲ ಉತ್ಪಾದನೆಯನ್ನು ಮೊದಲು ನಿಷೇಧಿಸಿ ಆ ಬಳಿಕ ಅದರ ಬಳಕೆಯ ಮೇಲೆ ನಿರ್ಬಂಧ ವಿಧಿಸಬೇಕಿತ್ತು; ಉತ್ಪಾದನೆಯನ್ನು ತಡೆಯದೆ ಬಳಕೆ ನಿಷೇಧಿಸುವುದು ಸರಿಯಲ್ಲ. ಮೀನು ಕೊಂಡೊಯ್ಯಲು ಬಟ್ಟೆ ಚೀಲ ಸಮರ್ಪಕವಾದುದಲ್ಲ ಆದ್ದರಿಂದ ಮೀನು ಕೊಂಡೊಯ್ಯಲು ಸೂಕ್ತ ಪರ್ಯಾಯ ಚೀಲವನ್ನು ಒದಗಿಸಿ ಕೊಡಿ ಎಂದು ಸಲಹೆ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿಯವರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಮೀನು ಮಾರಾಟ ಮಹಿಳೆಯರು ಜಿಲ್ಲಾಧಿಕಾರಿಗಳು ನೀಡಿದ ಬಟ್ಟೆ ಚೀಲಗಳಿಗೆ ಬೆಂಕಿಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಅಷ್ಟರಲ್ಲಿ ಜಿಲ್ಲಾಧಿಕಾರಿಗಳು ಅಲ್ಲಿಂದ ನಿರ್ಗಮಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English