ಜೈ ಶ್ರೀರಾಮ್‌ ಎಂದು ಬರೆದು ಅಯೋಧ್ಯೆಯಲ್ಲಿ ಶಿಲಾನ್ಯಾಸ ಆಗುತ್ತಿದ್ದಂತೆ ಸಂಭ್ರಮಿಸಿದ ಮುಸ್ಲಿಂ ಕಲಾವಿದ

3:19 PM, Thursday, August 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

munafಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನಗರದ ಅಮರೇಶ್ವರ ಕಾಲೋನಿಯ ಮುನಾಫ್‌ ಹರ್ಲಾಪುರ ಎಂಬುವರು ಪುಟ್ಟ ಹಾಳೆಯಲ್ಲಿ ಮಂಡಲದ ಮಧ್ಯೆ ಶ್ರೀ ರಾಮನ ಪಾದಗಳ ಚಿತ್ರ ಬಿಡಿಸಿ, ಸುತ್ತಲು ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ. ಜೊತೆಗೆ ರಾಮ ಭಕ್ತ ಹನುಮನನ್ನು ಬಿಡಿಸುವ ಮೂಲ ರಾಮಲಲ್ಲಾ ಜಪ ಮಾಡಿ, ಸಂಭ್ರಮಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವುದರಿಂದ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಹಿಂದೂಗಳು ವಿವಿಧ ದೇವಸ್ಥಾಗಳಲ್ಲಿ ಹೋಮ, ಹವನ ಹಾಗೂ ಜಪತಪಗಳಲ್ಲಿ ಮುಳುಗಿದ್ದರೆ,  ಇವರು  ಆಂಜನೇಯ ಹಾಗೂ ಮಂಡಲದಲ್ಲಿ ಶ್ರೀರಾಮನ ಪಾದಗಳನ್ನು ಚಿತ್ರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಕಲಾವಿದ ಮುನಾಫ್‌ ಹರ್ಲಾಪುರ ಅವರು ಈ ಹಿಂದೆಯೂ ವಿವಿಧೆ ಹಬ್ಬ, ಹರಿದಿನಗಳ ಸಂದರ್ಭದಲ್ಲಿ ದೇವರು, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುನಾಫ್‌ ಹರ್ಲಾಪುರ, ಕಲೆಗೆ ಧರ್ಮ, ಜಾತಿಗಳೆಂಬುದಿಲ್ಲ. ಅದು ಎಲ್ಲವನ್ನೂ ಮೀರಿದೆ. ಕಲೆಯ ಮೂಲಕ ಜನರಲ್ಲಿ ಸೌಹಾರ್ದತೆ ಬೆಸೆಯುವುದು ಇದರ ಹಿಂದಿನ ಉದ್ದೇಶ. ಈ ಹವ್ಯಾಸದಿಂದ ಆನಂದವಾಗುತ್ತದೆ ಎನ್ನುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English