ಧಾರವಾಡ : ಜಿಲ್ಲೆಯ ಬೇಗೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಸಾವು ಧಾರವಾಡ ಜಿಲ್ಲೆ ಜನತೆಗೆ ಹೆಣ್ಣು ಮಕ್ಕಳನ್ನು ಕಾಪಾಡುವ ಭಯದ ವಾತಾವರಣ ಬಂದಿದೆ, ಆರೋಪಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ನೇಹ ಬಳಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದೆ.
ಅಪರಾಧಿಯನ್ನು ಮಾತ್ರ ಬಂಧಿಸಿದ್ದೀರಿ ಆದರೆ ಅಪರಾಧಿ ಬಶೀರ ನ ಸಂಬಂಧಿಕರು ಪೂಜಾಳಾ ಕುಟುಂಬಕ್ಕೆ ಜೀವ ಬೆದರಿಕೆ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದಕಾರಣ ಬಶೀರ ನ ಕುಟುಂಬಸ್ಥರನ್ನು ಬಂಧಿಸಬೇಕು ಮತ್ತು ಬಶೀರ ನ ಮೇಲೆ 302 ಸೆಕ್ಷನ್ ಹಾಕಬೇಕು ಎಂದು ವೇದಿಕೆಯಾ ಸದಸ್ಯರು ಒತ್ತಾಯಿಸಿದ್ದಾರೆ.
ಇದೇ ರೀತಿ ಮದನ ಬಾವಿಯಲ್ಲಿ ಕೂಡ ಅತ್ಯಾಚಾರ ನಡೆದಿದೆ. ರಾಜ್ಯ ಸರಕಾರ ಈ ಬಲತ್ಕಾರ ಮಾಡಿದವರನ್ನು ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು, ಸಾರ್ವಜನಿಕವಾಗಿ ಉತ್ತರಪ್ರದೇಶದಲ್ಲಿ ಮಹಿಳಾ ವೈದ್ಯರ ಮೇಲೆ ಬಲತ್ಕಾರ ಹಾಗೂ ಕೊಲೆಮಾಡಿದ ಕಾಮುಕರಿಗೆ ಯಾವ ರೀತಿ ಪೊಲೀಸ್ ಇಲಾಖೆಯು ಎನ್ಕೌಂಟರ್ ಮಾಡಿದರು ಅದೇ ರೀತಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಪೋಲಿಸ್ ಇಲಾಖೆಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ರಾಜ್ಯ ಸರಕಾರವನ್ನು ವೇದಿಕೆ ಸದಸ್ಯರು ಒತ್ತಾಯಿಸಿದರು.
ಮುಂದೆ ಯಾವ ಅಪರಾಧಿಯು ಕೂಡ ಬಲತ್ಕಾರ ವಿಷಯದಲ್ಲಿ ಬಲಿಯಾಗಬಾರದು ಎಂದು ತಮ್ಮಲ್ಲಿ ವಿನಂತಿಸುತ್ತೇವೆ. ಕೂಡಲೇ ಪೊಲೀಸ್ ಅಧಿಕಾರಿಗಳು ಚಾರ್ಜ್ಶೀಟ್ ಅನ್ನು ಬೇಗನೆ ಸಲ್ಲಿಸಿ ಬಲತ್ಕಾರ ಮಾಡಿದವರಿಗೆ ಗಲ್ಲು ಶಿಕ್ಷೆ ಆಗುವ ಹಾಗೆ ಮಾಡಬೇಕೆಂದು ಕರ್ನಾಟಕ ವೇದಿಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ನೇಹ ಬಳಗ ದ ಸದಸ್ಯರು ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಂತೋಷ ಸುಬ್ಬಣ್ಣವರ ಧಾರವಾಡ ಮತ್ತು ವೇದಿಕೆಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English