ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ

2:04 PM, Tuesday, August 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

poornimaಮಂಗಳೂರು :  ಪಂಪ್‍ವೆಲ್ ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆಂದು ಹೋದ ಯುವತಿ ವಾಪಸ್ಸು ಮನೆಗೆ ಬಾರದೆ  ಆಗಸ್ಟ್ 13 ರಿಂದ ಕಾಣೆಯಾಗಿದ್ದಾರೆ.

ಪೂರ್ಣಿಮಾ (35) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಪೂರ್ಣಿಮಾ, ಪ್ರಾಯ – 35 ವರ್ಷ, ಎತ್ತರ-5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಎದುರಿನ ಹಲ್ಲು ಹೊರಬಂದಂತೆ ಕಾಣುತ್ತದೆ. ಧರಸಿದ ಬಟ್ಟೆ-ನೀಲಿ ಬಣ್ಣದ ಟಾಪ್ ಹಾಗೂ ಜೀನ್ಸ್ ಪ್ಯಾಂಟ್ ಶರ್ಟ್, ಮಾತನಾಡುವ ಭಾಷೆ- ಕನ್ನಡ, ತುಳು.

ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ಉಪನಿರೀಕ್ಷಕರು, ಕಂಕನಾಡಿ ನಗರ ಠಾಣೆ, ಮಂಗಳೂರು ದೂರವಾಣಿ ಸಂಖ್ಯೆ 0824 2220529, 9480805354, 0824 2220800 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English