ಸಾಲಕೊಟ್ಟ 26 ಸಾವಿರ ವಾಪಸು ಕೊಟ್ಟಿಲ್ಲ ಎಂದು ಚಾರ್ಮಾಡಿ ಘಾಟಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

12:45 PM, Thursday, August 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Nagaraj Holalkere ಚಿಕ್ಕಮಗಳೂರು : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆಯ  ವ್ಯಕ್ತಿಯೋರ್ವ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಕಾರಿನಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು 44 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆ ದೇವಪುರ ಗ್ರಾಮದವರು ಎನ್ನಲಾಗಿದೆ.

ವಿಷ ಸೇವಿಸಿದ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿರುವುದು  ಸಂಶಯಕ್ಕೆ ಎಡೆ ಮಾಡಿದೆ.

ಮಂಗಳವಾರ ಸಂಜೆಯಿಂದ ಕಾರು ಇಲ್ಲಿದ್ದು, ಬುಧವಾರ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕಾರಿನ ಪಕ್ಕ ವಿಷದ ಬಾಟಲಿ ಪತ್ತೆಯಾಗಿದ್ದು, ಡ್ರೈವಿಂಗ್ ಸೀಟಿನಲ್ಲಿ ಕುಳಿತು ವಿಷ ಸೇವಿಸರಬಹುದು ಎಂದು ಅಂದಾಜಿಸಲಾಗಿದೆ.

ಕಾರಿನಲ್ಲಿ ನಾಗರಾಜು ಬರೆದಿದ್ದಾನೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಗಿರೀಶ್ ಎಂಬಾತ ನನಗೆ 26 ಸಾವಿರ ರೂಪಾಯಿ ಹಣ ನೀಡಬೇಕಿದ್ದು, ನನ್ನ ಬೈಕ್ ಕೂಡಾ ಆತನಿಗೆ ಕೊಟ್ಟಿದ್ದೇನೆ ಎಂದು ಬರೆದಿದ್ದಾರೆ.

ನಾಗರಾಜು ಅವರ ಪತ್ನಿ 20 ದಿನಗಳ ಹಿಂದೆ ಸಾವನ್ನಪ್ಪಿದ್ದರು ಎನ್ನಲಾಗಿದೆ. “ ಪತ್ನಿಯನ್ನು ಕಳೆದುಕೊಂಡ ಮೇಲೆ ನನಗೆ ಜೀವನ ಬೇಸರವಾಗಿದೆ. ಅವಳನ್ನು ಬಿಟ್ಟು ನನಗೆ ಜೀವನವೇ ಇಲ್ಲ. ಹಾಗಾಗಿ ಅವಳ ದಾರಿಗೆ ನಾನು ಸಾಗುವೆ” ಎಂದು ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ.

Nagaraj Holalkere

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English