ಹೊಸ ಮೊಬೈಲ್ ಫೋನ್ ಅವಾಂತರ, ಮಂಜೇಶ್ವರದ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆ

10:52 PM, Thursday, August 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

missingಮಂಗಳೂರು: ಮಂಜೇಶ್ವರ ಸಮೀಪದ ಮೀಯಪದವು ಎಂಬಲ್ಲಿ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರು 16, 17 ಹಾಗೂ 21 ವಯಸ್ಸಿನ ಸೋದರಿಯಾರಾಗಿದ್ದು ಮನೆಯವರು ಮತ್ತು ಅಕ್ಕ ಪಕ್ಕದವರಲ್ಲಿ ಆತಂಕಕ್ಕೆ  ಕಾರಣವಾಗಿದೆ. ಆಗಸ್ಟ್ 16ರಂದು ಮೂರು ಮಂದಿ ಜೊತೆಯಲ್ಲೇ ಆಸ್ಪತ್ರೆಗೆಂದು ಹೋಗಿದ್ದು ಬಳಿಕ ವಾಪಸ್ ಆಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಯುವತಿಯರ  ನಾಪತ್ತೆಗೆ ಹೊಸ ಮೊಬೈಲ್ ಫೋನ್ ಎಂದು ಹೇಳಲಾಗುತ್ತಿದೆ. ಮೂವರಲ್ಲಿ ಓರ್ವ ಯುವತಿ ಕೆಲದಿನಗಳಿಂದ ಹೊಸ ಮೊಬೈಲ್ ಫೋನ್ ಬಳಸುತ್ತಿದ್ದು ಈ ಬಗ್ಗೆ ಮನೆಮಂದಿ ವಿಚಾರಿಸಿದ್ದರು. ಈ ವೇಳೆ ಆಕೆ ಸರಿಯಾಗಿ ಉತ್ತರಿಸಿರಲಿಲ್ಲ. ಇದರಿಂದ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ಘಟನೆಯ ಬಳಿಕ ಮೂವರೂ ನಾಪತ್ತೆಯಾಗಿದ್ದು ನಿಗೂಢತೆ ಸೃಷ್ಟಿಸಿದೆ.

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪತ್ತೆಹಚ್ಚಲು ಸೈಬರ್ ಸೆಲ್ ನೆರವು ಪಡೆದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English