ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಕಸಗಳನ್ನು ಎಸೆದು ಹೋಗುತ್ತಿದ್ದ ಉಸ್ಮಾನ್ ಮತ್ತು ಅಶ್ರಫ್ ಎಂಬುವರಿಗೆ ತಲಾ ರೂ. 5 ಸಾವಿರ ದಂಡ ವಿಧಿಸಿ ಪುತ್ತೂರು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮನೆ ಮನೆ ತ್ಯಾಜ್ಯ ಸಂಗ್ರಹ ನಡೆಯುತ್ತಿದ್ದರೂ ಕೆಲವೊಂದು ಕಡೆ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸಗಳನ್ನು ಹಾಕಿ ಪರಿಸರ ಮಲೀನಗೊಳಿಸುತ್ತಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಸದ ರಾಶಿ ಇರುವ ಸ್ಥಳಗಳ ಬಳಿ ಕಸ ಹಾಕುವವರನ್ನು ಹಿಡಿಯಲು ಕಾದು ಕುಳಿತಿದ್ದರು.
ಸಂಪ್ಯ ಕಡೆಯಿಂದ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಇಬ್ಬರು ಕಸ ಎಸೆದು ತೆರಳುವಷ್ಟರಲ್ಲಿ ಅವರನ್ನು ನಗರಸಭೆ ಸಿಬ್ಬಂದಿ ಸುತ್ತುವರಿದು ತಡೆದರು. ಈ ವೇಳೆ ಸ್ವಲ್ಪ ಗೊಂದಲ ಏರ್ಪಟ್ಟಾಗ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಕಸ ಎಸೆಯುವವರನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರುಣ್ ಕೆ., ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಮತ್ತು ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಸಿಬ್ಬಂದಿ ಅಮಿತ್‌ರಾಜ್, ನಗೇಶ್, ಜೀಪು ಚಾಲಕ ರಾಧಾಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English