ಮಂಗಳೂರು : ಮೀನುಗಾರಿಕೆಗೆ ತೆರಳಿದ ಎಫ್. ಎಂ. ಫಯಾಜ್ ಎಂಬುವವರಿಗೆ ಸೇರಿದ ಬೋಟೊಂದು ಮಂಗಳವಾರ ಮುಳುಗಡೆಗೊಂಡು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ .
ಮಂಗಳವಾರ ಮಲ್ಪೆ ಬಂದರಿನಿಂದ ಹೊರಟ ಬೋಟ್ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಂದರಿನ ನೇರ ತೆಲ್‌ಕಲ್ ಸಮೀಪ ಸಾಗುತ್ತಿದ್ದಾಗ ಬೋಟ್‌ನ ಅಡಿಭಾಗ ಕಲ್ಲಿಗೆ ತಾಗಿ ಹಲಗೆ ಮುರಿದು ನೀರು ಒಳನುಗ್ಗಿ ಬೋಟ್ ಮುಳುಗಡೆಗೊಂಡಿದೆ.
ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರು ಹಾಗೂ ಬೋಟನ್ನು ಸಮೀಪದಲ್ಲಿದ್ದ ಹನುಮಬೆನಕ ಬೋಟಿನವರು ರಕ್ಷಿಸಿ ದಡ ಸೇರಿಸಿದ್ದಾರೆ. ಸುಮಾರು 30 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
Click this button or press Ctrl+G to toggle between Kannada and English