ಕೇರಳ ಪೊಲೀಸರು ಮತ್ತು ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ ಬಿಜೆಪಿಯಿಂದ ತಲಪಾಡಿಯಲ್ಲಿ ಪ್ರತಿಭಟನೆ

10:11 PM, Tuesday, September 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bjp protestಮಂಜೇಶ್ವರ : ಕೇರಳ ಮತ್ತು ಕರ್ನಾಟಕ ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿ ಮಂಜೇಶ್ವರ ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ತಲಪಾಡಿಯಲ್ಲಿ ಗಡಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿಗಳು ಆದ ಶ್ರೀಕಾಂತ್ ಚಾಲನೆ ನೀಡಿದರು. ಮಂಜೇಶ್ವರ ಮಂಡಲ ಸಮಿತಿಯ ಅಧ್ಯಕ್ಷರಾದ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು.

ಕೊರೊನಾ ಪಾಸಿಟಿವ್ ಹೆಚ್ಚಿರುವ ಮಲಪ್ಪುರಂ, ಕಣ್ಣೂರು ಮತ್ತು ಅನ್ಯರಾಜ್ಯಗಳಿಂದ ವ್ಯಾಪಾರ ಸಂಭಂದಿತ ಸರಕು ವಾಹನಗಳಿಗೆ ಯಾವುದೇ ನಿರ್ಬಂಧ ಮಾಡದೆ ಕೇವಲ ದಕ್ಷಿಣಕನ್ನಡ ಜಿಲ್ಲೆಗೆ ಉದ್ಯೋಗ, ಚಿಕಿತ್ಸೆ, ತುರ್ತು ಕೆಲಸಗಳಿಗೆ ಹೋಗುವವರಿಂದ ಮಾತ್ರ ಕಾಸರಗೋಡಿಗೆ ಕೊರೊನಾ ಬರುತ್ತದೆ ಅನ್ನುವುದು ಇಲ್ಲಿನ ಅಧಿಕಾರಿ ವರ್ಗಗಳ ಮೂರ್ಖತನವಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

Bjp protestಕಾಸರಗೋಡಿನ ಜನರ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿನ ಶಾಸಕ, ಸಂಸದರು ಮೌನವಾಗಿರುವುದು ಇವರ ರಾಜಕೀಯ ಒಳ‌ಒಪ್ಪಂದ ಆಗಿದೆ. ಲಾಕ್‌ಡೌನ್ ನೆಪದಲ್ಲಿ ಮುಚ್ಚಿದ್ದ ತಲಪಾಡಿ ಗಡಿಯನ್ನು ಇನ್ನೂ ತೆರೆಯದಿರುವುದು ಕಾಸರಗೋಡಿನ ಜಿಲ್ಲಾಡಳಿತವು ಮತ್ತು ಕೇರಳ ಸರಕಾರವು ಕಾಸರಗೋಡಿಗರಲ್ಲಿ ತೋರಿಸುವ ಮಲತಾಯಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಜಿಲ್ಲಾಡಳಿತದ ಮುಂದಿನ ಕೋರ್ ಕಮಿಟಿ ಸಭೆಯ ತೀರ್ಮಾನದ ವರೆಗೆ ಗಡಿಯಲ್ಲಿ ಮುಕ್ತ ಪ್ರವೇಶ ನೀಡಬೇಕು, ಯಾವುದೇ ಆಂಟಿಜೆನ್ ಟೆಸ್ಟ್ ಕೋರ್ ಕಮಿಟಿ ತೀರ್ಮಾನದ ವರೆಗೆ ಮಾಡಬಾರದು ಎಂದು ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ವಿಜಯ ರೈ, ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್. ಕೆ. ಜೆ, ಮಂಡಲ ಬಿಜೆಪಿ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಗೋಪಾಲ ಶೆಟ್ಟಿ ಅರಿಬೈಲು, ಕೋಳಾರ್ ಸತೀಶ್ಚಂದ್ರ ಭಂಡಾರಿ, ಅವಿನಾಶ್ ಮಂಜೇಶ್ವರ, ರಾಜೇಶ್ ತೂಮಿನಾಡು. ಸಂತೋಷ್ ದೈಗೋಳಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಯಾದವ್, ಕಾರ್ಯದರ್ಶಿ ಆದರ್ಶ ಬಿ. ಎಂ. ಮೊದಲಾದವರು ಉಪಸ್ಥಿತರಿದ್ದರು

ಮಂಡಲ ಸದಸ್ಯರು, ಯುವ ಮೋರ್ಚಾ, ಮಹಿಳಾ ಮೋರ್ಚಾ, ಒಬಿಸಿ ಮೋರ್ಚಾ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Bjp protest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English