ಮಂಡ್ಯ : ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಮಂಡ್ಯ ಜಿಲ್ಲೆಯ ಮಾಜಿ ಸಂಸದರ ಮಗ ಹಾಗೂ ಮಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮಾಲೀಕರಾಗಿರುವ ಮಾಜಿ ಸಂಸದರ ಪುತ್ರ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕದಲ್ಲಿದ್ದು ರಾಹುಲ್‍ನ ವಾಟ್ಸ್ ಆಪ್ ಚಾಟ್, ಕಾಲ್‍ಲಿಸ್ಟ್ ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಜತೆಗೆ ಪಾರ್ಟಿ, ಕ್ಲಬ್‍ಗಳಲ್ಲಿ ಇಬ್ಬರೂ ರಾಹುಲ್ ಜೊತೆ ಸೇರಿಕೊಳ್ಳುತ್ತಿದ್ದರಂತೆ. ಹೀಗಾಗಿ ಮಾಜಿ ಸಂಸದರ ಪುತ್ರ-ಪುತ್ರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಮಂಡ್ಯದ ಪ್ರಭಾವಿ ರಾಜಕಾರಣಿಯ ಮಕ್ಕಳಿಗೆ ನೋಟಿಸ್ ನೀಡುತ್ತಿದ್ದಂತೆ ಉಳಿದ ರಾಜ್ಯದ ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಸಿನಿಮಾ ಕ್ಷೇತ್ರದವರ ಎದೆಯಲ್ಲಿ ಮತ್ತಷ್ಟು ಢವಢವ ಹೆಚ್ಚಾಗುವಂತೆ ಮಾಡಿದೆ.
ಇದೇ ವೇಳೆ ಸಿಸಿಬಿ ಪೊಲೀಸರು ಕೋರಮಂಗಲದ ಹೋಟೆಲ್ ಉದ್ಯಮಿ ಕಾರ್ತಿಕ್ ರಾಜ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಕೋರಮಂಗಲದಲ್ಲಿ ಮಲ್ಟಿ ಸ್ಟಾರ್ ಹೋಟೆಲ್ ಹೊಂದಿರುವ ಕಾರ್ತಿಕ್ ರಾಜ್, ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಮನೆ ಹೊಂದಿದ್ದಾರೆ. ಕಾರ್ತಿಕ್ ರಾಜ್ ಜತೆ ಮಲ್ಟಿ ಸ್ಟಾರ್ ಗಳ ಸಂಪರ್ಕ ಇದೆ ಎನ್ನಲಾಗಿದೆ. ಜತೆಗೆ ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ರಾಜ್ ಸ್ನೇಹಿತರು. ಇವರಿಬ್ಬರೂ ಪಾರ್ಟಿಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
Click this button or press Ctrl+G to toggle between Kannada and English