ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 52 ಕೋಣಗಳ ವಶ

1:14 PM, Tuesday, September 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

baffaloಉಡುಪಿ  : ಹೊರ ಜಿಲ್ಲೆಗಳಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಮಂಗಳವಾರ  ಬೆಳಗ್ಗೆ ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ  ಒಟ್ಟು 52 ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಹರಿಹರ ತಾಲೂಕಿನ ಮೆಹಬೂಬ್(27), ಬೆಳಗಾವಿ ಬೈಲಹೊಂಗಲ ತಾಲೂಕಿನ ಬಾಪು ಸಾಹೇಬ್(46) ಮತ್ತು ಆಸಿಫ್(23) ಹಾಗೂ ದಾವಣಗೆರೆ ಹೊಸ ಚಿಕ್ಕನಹಳ್ಳಿ ಹೊಸ ಬಡಾವಣೆಯ ಇಮ್ರಾನ್(29) ಬಂಧಿತ ಆರೋಪಿಗಳು.

ಎರಡು ಈಚರ್ ಲಾರಿಗಳಲ್ಲಿ ವಾಹನಗಳಲ್ಲಿ ಕ್ರಮವಾಗಿ 24 ಮತ್ತು 28 ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳು, ವಾಹನ ಹಾಗೂ ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English