ದುಬೈ ಕಾರ್ ರೇಸಿನಲ್ಲಿ ಭಾಗವಹಿಸಲಿರುವ ಮೂಡಬಿದಿರೆಯ ಸುಹೈಬ್

9:41 PM, Wednesday, September 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

suhailಮಂಗಳೂರು  : ದುಬೈನಲ್ಲಿ ಸೆಪ್ಟೆಂಬರ್ 17 ರಂದು ನಡೆಯಲಿರುವ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸ್‌ನ ಭಾರತೀಯ ತಂಡದಲ್ಲಿ ಮೂಡಬಿದಿರೆಯ ಯುವಕ ಸುಹೈಬ್ ಅಲಿ ಭಾಗವಹಿಸುತ್ತಿದ್ದಾರೆ.

ದುಬೈನಲ್ಲಿ  ಸೆಪ್ಟೆಂಬರ್ 17 ರಂದು ಗುರುವಾರ 6ಗಂಟೆಗಳ ಕಾಲ ನಡೆಯಲಿರುವ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್ 2020  ಕಾರ್ ರೇಸ್‌ನಲ್ಲಿ ಐವರನ್ನೊಳಗೊಂಡ ಭಾರತದ ತಂಡ ಭಾಗವಹಿಸಲಿದೆ. ಐವರ ಪೈಕಿ ಮೂಡಬಿದಿರೆಯ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದು ನಿನ್ನೆ ಬಜಪೆ ಏರ್‌ಪೋರ್ಟಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದ.ಕ.ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ.ಕೆ.ಅಬೂಬಕ್ಕರ್(ಮಡಿಕೇರಿ) ಪುತ್ರ ಸುಹೈಬ್ ಅಲಿ ಮಂಗಳೂರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಪದವಿ ಪಡೆದು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿರುವ ಅಮೆರಿಕನ್ ಮೂಲದ ಬಿಟೆಕ್ನಾಲಜಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ.

2016 ಮತ್ತು 2018 ರಲ್ಲಿ ನಡೆದಿದ್ದ ಕಾರ್ ರೇಸ್‌ನಲ್ಲಿ ಕರ್ನಾಟಕ ತಂಡದಲ್ಲಿದ್ದ ಸುಹೈಬ್ ಅವರು ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈವರೆಗೆ ಹತ್ತಕ್ಕೂ ಹೆಚ್ಚು ಕಾರ್ ರೇಸ್‌ಗಳಲ್ಲಿ ಭಾಗವಹಿಸಿದ್ದ ಇವರು ಪ್ರಥಮ,ದ್ವಿತೀಯ ಪ್ರಶಸ್ತಿಗಳ ಜೊತೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕೊಲ್ಕತ್ತಾ ಮೂಲದ ರೆಸೊಲೀ ಟ್ರೇಸಿಂಗ್ ಸಂಸ್ಥೆಯ ನೇತೃತ್ವದಲ್ಲಿರುವ ರೇಸರ್‍ಸ್ ತಂಡದಲ್ಲಿ ಕರ್ನಾಟಕದ ಪರವಾಗಿ ಆಯ್ಕೆಯಾದ ಸುಹೈಬ್ ಅಲಿ ಇದೀಗ ಭಾರತೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳವಾರದಂದು ದುಬೈಗೆ ತೆರಳುವ ಮುನ್ನ ಮಾತನಾಡಿದ ಸುಹೈಬ್ ಅಲಿ, ಭಾರತೀಯ ತಂಡದಲ್ಲಿ ಆಯ್ಕೆಯಾಗಿ ದುಬೈನಲ್ಲಿ ಭಾಗವಹಿಸುವುದು ಸಂತಸ ತಂದಿದೆ. ತಂದೆ ಎಂ.ಕೆ.ಅಬೂಬಕ್ಕರ್ ಮತ್ತು ನನ್ನ ಸಹೋದರಿ ಈ ಹಿಂದೆ ಹಲವಾರು ಕಾರ್ ರೇಸುಗಳಲ್ಲಿ ಭಾಗವಹಿಸಿರುವುದು ನನಗೆ ಸ್ಪೂರ್ತಿಯೆಂದು ಸುಹೈಬ್ ಅಲಿ ಸ್ಮರಿಸುತ್ತಿದ್ದಾರೆ. ಭಾರತದಲ್ಲಿ ಉತ್ತಮ ರೇಸರ್‍ಸ್ ಸೃಷ್ಟಿಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ಸುಹೈಲ್ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English