ದುಬೈ : ಕಾರ್ ರೇಸಲ್ಲಿ ಪ್ರಶಸ್ತಿ ಗೆದ್ದ ಸುಹೈಬ್ ಅಲಿ ಮತ್ತು ಭಾರತದ ತಂಡ

1:40 PM, Saturday, September 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

suhaib ವಿಟ್ಲ : ಗುರುವಾರದಂದು ದುಬೈನಲ್ಲಿ ನಡೆದ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸಲ್ಲಿ ಮೂಡಬಿದಿರೆಯ ಯುವಕನಿದ್ದ ಭಾರತದ ಟೀಮ್ ತೃತೀಯ ಸ್ಥಾನ ಪಡೆದು ದುಬೈನಲ್ಲಿ ಕೀರ್ತಿ ಪತಾಕೆ ಹಾರಿಸಿದೆ.

ದುಬೈನಲ್ಲಿ ಗುರುವಾರದಂದು 6ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020 ಕಾರ್ ರೇಸಲ್ಲಿ ಭಾರತ ದೇಶದ ಐವರು ಚಾಲಕರನ್ನೊಳಗೊಂಡ ಟೀಮ್ ಭಾಗವಹಿತ್ತು. ಕೊಲ್ಕಾತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಂಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಮೂಡಬಿದಿರೆಯ ಎಂ.ಕೆ.ಅಬೂಬಕ್ಕರ್ ಪುತ್ರ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದರು.

ಆರು ಗಂಟೆಗಳ ಕಾಲ ನಡೆದಿದ್ದ ರೇಸಲ್ಲಿ ಜಪಾನ್, ಬ್ರಿಟನ್, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳ ನುರಿತ ರೇಸರುಗಳನ್ನು ಹಿಂದಿಕ್ಕಿದ ಸುಹೈಬ್ ಅಲಿ ಅವರಿದ್ದ ಟೀಮ್ ತೃತೀಯ ಸ್ಥಾನವನ್ನು ಪಡೆದು ದುಬೈನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅರಳಿಸಿದ್ದಾರೆ.

suhaib

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English