ಪೆರ್ಲರ ‘ಅಮೃತ ಹಂಚುವ ಕೆಲಸ’ ಕೃತಿ ಬಿಡುಗಡೆ

7:29 PM, Monday, September 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Perlaಮಂಗಳೂರು :  ಸಾಹಿತಿ ಡಾ.ವಸಂತಕುಮಾರ್ ಪೆರ್ಲ ‘ಅಮೃತ ಹಂಚುವ ಕೆಲಸ’ ಚಿಂತನ ಮತ್ತು ಸಂಸ್ಕೃತಿ ಸಂಕಥನಗಳನ್ನೊಳಗೊಂಡ ಕೃತಿ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು.

ಭೂಮಿಗೀತ ಸಾಹಿತ್ಯಿಕ-ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ, ಸಾಹಿತ್ಯಾಸಕ್ತರು ಕೃತಿಗಳನ್ನು ಖರೀದಿಸಿ ಓದಿದಾಗ, ಲೇಖಕನಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಕೃತಿ ಪರಿಚಯ ಮಾಡಿದ ಡಾ.ವಸಂತಕುಮಾರ್ ಪೆರ್ಲ, ಇಂದಿನ ತಲೆಮಾರಿನಲ್ಲಿ ಮರೆಯಾಗುತ್ತಿರುವ ಭಾಷೆ, ಆಚರಣೆ ಮತ್ತು ಜೀವನ ಕ್ರಮಗಳ ಕುರಿತಾದ ಹಲವು ಹಳೇ ಸಂಗತಿಗಳನ್ನು ಪುಸ್ತಕದಲ್ಲಿ ನಿರೂಪಿಸಲಾಗಿದೆ. ಒಂದು ತಲೆಮಾರಿನ ಬದುಕಿನ ವಿಶಿಷ್ಟ ಚಿತ್ರಣಗಳ ನೂರು ಲೇಖನಗಳು ಕೃತಿಯಲ್ಲಿವೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ ಮುಖ್ಯ ಅತಿಥಿಯಾಗಿದ್ದರು. ವಿದುಷಿ ಆಯನಾ ಪೆರ್ಲ ಉಪಸ್ಥಿತರಿದ್ದರು. ವಿದುಷಿ ಅರ್ಥಾ ಪೆರ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭೂಮಿಗೀತ ಸಂಚಾಲಕಿ ಕೆ.ಶೈಲಾ ಕುಮಾರಿ ವಂದಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English