ಮಂಗಳೂರು: ಉದ್ಯಮಿಯೊಬ್ಬರು ಬಾಲಕಿಯೊಬ್ಬಳನ್ನು ಜೀತಕ್ಕೆ ಇಟ್ಟುಕೊಂಡಿದ್ದು ಆಕೆ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ತಪ್ಪಿಸಿಕೊಂಡಿದ್ದಲ್ಲದೆ, ರಸ್ತೆಗೆ ಬಂದು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಚೈಲ್ಡ್‌ಲೈನ್‌ಗೆ ಕರೆ ಮಾಡಿ ತಿಳಿಸಿದ್ದರು.
ಆ ಪ್ರಕಾರ ಬರ್ಕೆ ಪೊಲೀಸರು ಬಾಲಕಿಯನ್ನು ಜೀತಕ್ಕಿಟ್ಟುಕೊಂಡಿದ್ದ ಮನೆಗೆ ತೆರಳಿದ್ದು, ಯಾವುದೇ ಕ್ರಮ ವಹಿಸದೆ ಹಿಂದಿರುಗಿದ್ದಾರೆ ಎಂದು ಒಡನಾಡಿ ಎನ್ಜಿಒ ಸಂಸ್ಥೆ ಆರೋಪಿಸಿದೆ. ಬಳಿಕ ಬಾಲಕಿ ಒಡನಾಡಿ ಸಂಸ್ಥೆಗೆ ತೆರಳಿ ದೂರು ನೀಡಿದ್ದಳು.
ಮೈಸೂರಿನ ಈ ಬಾಲಕಿಯನ್ನು ಜೀತದಾಳು ಆಗಿ ಇರಿಸಿಕೊಂಡಿರುವುದರ ನಗರದ ಉದ್ಯಮಿಯೊಬ್ಬರ ವಿರುದ್ಧ ಮೈಸೂರಿನ ಒಡನಾಡಿ ಎನ್ಜಿಒ ಸಂಸ್ಥೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದೆ.
‘ಬಾಲಕಿ ಜೀತ ಅನುಭವಿಸುತ್ತಿದ್ದ ಬಗ್ಗೆ ಸಂಸ್ಥೆಯ ದೂರಿನ ಮೇರೆಗೆ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯಿಂದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ಬಂದ ಮೇರೆಗೆ ತನಿಖೆ ಪ್ರಕ್ರಿಯೆ ಆರಂಭಿಸಿದ್ದೇವೆ. ಈ ಬಗ್ಗೆ ಇನ್ನಷ್ಟೇ ಸಾಕ್ಷ್ಯಗಳನ್ನು ಕಲೆ ಹಾಕಬೇಕಾಗಿದೆ’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ತಿಳಿಸಿದ್ದಾರೆ.
ಒಡನಾಡಿ ಸಂಸ್ಥೆ ನೀಡಿದ ದೂರಿನ ಮೇರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸೂಚನೆಯಂತೆ ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿದ್ದಾರೆ.
Click this button or press Ctrl+G to toggle between Kannada and English