ಮಂಗಳೂರು : ವಿಟ್ಲ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯೊಂದಕ್ಕೆ ನುಗ್ಗಿ ಅಪರಿಚಿತ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೇಗಿನಪೇಟೆ ನಿವಾಸಿ ಲಲಿತಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಅವರ ಮನೆಯ ಮುಂಬಾಗಿಲು ಮೂಲಕ ಅಪರಿಚಿತ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ, ಕೃತ್ಯ ಎಸಗಿದ್ದಾನೆ.
ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈಕಟ್ಟಿ ಹಾಕಿ ಒಂದು ಜೊತೆ ಕಿವಿಯೋಲೆ ದರೋಡೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿ, ಸ್ಥಳದಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English