ಬೆಂಗಳೂರು : 15 ಲಕ್ಷ ರು. ವೆಚ್ಚ ಮಾಡಿ ಮದುವೆ ಮಾಡಿದರೂ ಪದೇ ಪದೇ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊನೆಗೆ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಪತಿ ಸೇರಿದಂತೆ ನಾಲ್ವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ಪತಿ ಸೂರಜ್ ಸಿಂಗ್ ಮತ್ತು ಆರೋಪಿಗೆ ಪ್ರಚೋದಿಸಿದ ಆತನ ತಂದೆ ಲೌನೇಶ್, ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಟಿ.ಸಿ.ಪಾಳ್ಯದ ನಿವಾಸಿದಿಂದ ಬಂಧಿಸಲಾಗಿದೆ.
ಸಂತ್ರಸ್ತೆಯು ತೀವ್ರ ಆಘಾತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀಡಾ ಅಂಗಡಿಯನ್ನಿಟ್ಟುಕೊಂಡಿದ್ದ ಸೂರಜ್ ಸಿಂಗ್ ಕಳೆದ ಒಂದು ವರ್ಷದ ಹಿಂದೆ ಯುವತಿಯನ್ನು ಮದುವೆಯಾಗಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. 15 ಲಕ್ಷ ರು. ವೆಚ್ಚ ಮಾಡಿ ಮದುವೆ ಮಾಡಿದರೂ ಮತ್ತಷ್ಟು ಹಣ ತರುವಂತೆ ಒತ್ತಾಯಿಸುತ್ತಿದ್ದ. ಒಂದೆರಡು ಬಾರಿ ಹಣ ತಂದುಕೊಟ್ಟಿದ್ದಳು. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದು, ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು.
ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English