ಮಂಗಳೂರು :ಮಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಕಾದು ಕುಳಿತ್ತಿದ್ದ ಆರ್‌ಸಿ-ಕೆಎಸ್‌ಸಿಎ ಕ್ರಿಕೆಟ್ ಆಕಾಡೆಮಿ ಸೋಮವಾರ ನಗರದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಮ್ಯಾನೇಜ್‌ಮೆಂಟ್‌ನ ಆವರಣದಲ್ಲಿ ಉದ್ಘಾಟನೆಗೊಂಡಿತು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಪ್ರೊ|. ಡಾ| ಎಂ. ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ದ.ಕನ್ನಡ ಜಿಲ್ಲೆ ಬ್ಯಾಂಕಿಂಗ್, ಶಿಕ್ಷಣ, ಉದ್ದಿಮೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನ ಹಿರಿಮೆಯನ್ನು ಸಾಧಿಸಿದೆ ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಮೂಲಭೂತ ಸೌಲಭ್ಯಗಳ ಕೊರತೆ. ಇದೀಗ ಕ್ರಿಕೆಟ್ ಆಕಾಡೆಮಿ ಸ್ಥಾಪನೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಮಾತನಾಡಿ ನಗರದಲ್ಲಿ ಈ ರೀತಿಯ ಕ್ರಿಕೆಟ್ ಕೇಂದ್ರ ಆರಂಭವಾಗುತ್ತಿರುವುದು ಇದೆ ಮೊದಲು ಕೇಂದ್ರದಲ್ಲಿ ಮಕ್ಕಳು ಸೂಕ್ತ ರೀತಿಯಲ್ಲಿ ಪಳಗಲಿದ್ದಾರೆ ಎಂದವರು ಹೇಳಿದರು. ಇದೆ ವೇಳೆ ಪ್ರತಿಕ್ರಿಯೆ ನೀಡಿದ ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಈಗಾಗಲೇ ಅಕಾಡಮಿ ಸ್ಥಾಪನೆಗೊಂಡಿದ್ದು ಮಂಗಳೂರಿನಲ್ಲಿದು 4 ನೇ ಅಕಾಡಮಿ ಎಂದರು. ಭಂಡಾರಿ ಎಜುಕೇಶನ್ ಫೌಂಡೆಶನ್ ಅಧ್ಯಕ್ಷ ಮಂಜುನಾಥ್ ಭಂಡಾರಿ ಕಾಲೇಜಿನ ಬಳಿ ಸರ್ಕಾರಿ ಜಾಗವಿರುವುದರಿಂದ ಅದನ್ನು ನೀಡುವಂತೆ ಜಿಲ್ಲಾಧಿಕಾರಿ ಬಳಿ ವಿನಂತಿಸಿದ್ದೇನೆ ಎಂದರು.
ಅಕಾಡಮಿ ನಿರ್ದೇಶಕ ಸೈಯದ್ ಕಿರ್ಮಾನಿ, ಮಂಗಳೂರು ವಲಯದ ಅಧ್ಯಕ್ಷ ದಯಾನಂದ ಪೈ, ಕೆಎಸ್‌ಸಿಎ ಮಂಗಳೂರು ವಲಯದ ಕನ್ವೀನರ್ ಡಾ| ಶ್ರೀಕಾಂತ್ ರೈ, ಶಶಿಕಿರಣ್ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English