ಮಂಗಳೂರು : ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಪುರಭವನದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳು ಹಾಗೂ ಗಣ್ಯರು ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಡಿ.ಸಿ ಪೊನ್ನುರಾಜ್, ಪೊಲೀಸ ಕಮಿಷನರ್ ಸೀಮಂತ ಕುಮಾರ ಸಿಂಗ್, ದ.ಕ ಎಸ್.ಪಿ, ಶಾಸಕ ಯುಟಿ ಖಾದರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ಸುಧಾಕರ ರಾವ್ ಪೇಜಾವರ್ ಮತ್ತಿತರರುಗಾಂಧೀ ಪ್ರತಿಮೆಗೆ ಹಾರಾರ್ಪಣೆ ಗೈದು ಗೌರವ ಸಲ್ಲಿಸಿದರು. ಸ್ವಾತಂತ್ರ್ಯಯೋಧ, ಪಿ.ಭೋಜ ರಾಜ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಗರದ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿನ ಗಾಂಧಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮನಾಪ ಎದುರು ಇರುವ ಗಾಂಧೀಜಿ ಪುತ್ಥಳಿಗೆ ಮೇಯರ್ ರಜನಿ ದುಗ್ಗಣ ಹಾರಾರ್ಪಿಸಿ ಗೌರವ ಸಲ್ಲಿಸಿದರು. ಮನಾಪ ಅಯುಕ್ತ ಡಾ| ಎನ್ ವಿಜಯ್ ಪ್ರಕಾಶ್, ಉಪ ಮೇಯರ್ ರಾಜೇಂದ್ರ ಕುಮಾರ್, ಮನಾಪ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಠಾಗೋರ್ ಪಾರ್ಕಿನ ಶಾಂತಿ ಪ್ರತಿಷ್ಠಾನದ ಮಹಾತ್ಮಾ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಗೈದು ಗೌರವ ಸಲ್ಲಿಸಲಾಯಿತು.
Click this button or press Ctrl+G to toggle between Kannada and English