ಸ್ಯಾಂಡ್ ಬಜಾರ್ ಆಪ್ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಮರಳು ಒದಗಿಸಲು ಒತ್ತಾಯ

4:24 PM, Tuesday, November 17th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Sand Bazarಮಂಗಳೂರು  :  ಸ್ಯಾಂಡ್ ಬಜಾರ್ ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಕಡಿಮೆ ಮತ್ತು ನ್ಯಾಯಯುತ ದರದಲ್ಲಿ ಗುಣಮಟ್ಟ್ಟದ ಮರಳನ್ನು ಒದಗಿಸಿಕೊಳ್ಳಲು ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರಸ್ತುತ 3 ಯುನಿಟ್ ಮರಳಿಗೆ 17,000/- ರಿಂದ 20,000/- ತನಕ ದರ ವಿಧಿಸಲಾಗುತಿದೆ, ಸಿಮೆಂಟಿಗಿಂತಲೂ ಮರಳಿನ ದರ ಜಾಸ್ತಿಯಾಗಿರುತ್ತದೆ. ಆದುದರಿಂದ ದರ ನಿಗದಿಪಡಿಸಿ ಸ್ಯಾಂಡ್ ಬಜಾರ್ ಮೂಲಕವೇ ಮರಳು ನೀಡಲು ಕಾಂಗ್ರೆಸ್  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಹಿಂದೆ ಕುಮಾರಸ್ವಾಮಿಯವರ ಸರಕಾರವಿದ್ದಾಗ ಸ್ಯಾಂಡ್ ಬಜಾರ್ ಎಂಬ ಆಪ್ ವೊಂದನ್ನು ತಯಾರಿಸಿ, ಸರಕಾರ ನಿಗದಿಮಾಡಿದ ದರದಲ್ಲಿ ಮರಳನ್ನು ವಿತರಿಸಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮರಳು ಸಿಗಲು ಸಾಧ್ಯವಾಗಿದೆ, ಈ ಬಗ್ಗೆ ಜನರಿಂದ  ಮೆಚ್ಚುಗೆ  ವ್ಯಕ್ತವಾಗಿತ್ತು ಎಂದು ಐವನ್ ಡಿ ಸೋಜ ಹೇಳಿದ್ದಾರೆ.

ಮಾಹಿತಿ ಪ್ರಕಾರ 89 ಮಂದಿಗೆ CRZನಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ರಾಜಕೀಯ ಒತ್ತಡಕ್ಕೊಳಪಟ್ಟು ಬಿಜೆಪಿ ಕಾರ್ಯಕರ್ತರಿಗೆ 50 ಮಂದಿಗೆ ಕಾನೂನು ಬಿಟ್ಟು ನೀಡಬೇಕೆಂದು ಒತ್ತಡ ಬಂದಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಲು ಕಾಂಗ್ರೆಸ್ ಒತ್ತಾಯಿಸುತ್ತದೆ. CRZನಲ್ಲಿ ತೆಗೆಯಲಾಗುವ ಮರಳು ವಿತರಿಸಲು ಕಡ್ಡಾಯವಾಗಿ ಪಾರದರ್ಶಕತೆ ಮತ್ತು ನಿರ್ಮಾಣ ಕಾರ್ಯಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಮರಳು ಸಿಗಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಕೇರಳ ಮತ್ತು ಕರ್ನಾಟಕ ರಾಜ್ಯಾದ್ಯಂತ ಜಿಲ್ಲೆಯಿಂದ ಕಾನೂನುಬಾಹಿರವಾಗಿ ಮರಳು ಸಾಗಣಿಕೆ ಆಗುತ್ತಿರುವುದು ಎಲ್ಲರಿಗೆ ತಿಳಿದ ವಿಷಯವಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಪೋಲಿಸ್ ಅಧಿಕಾರಿಗಳು ಮರಳು ಸಾಗಣಿಕೆಯಲ್ಲಿ ಕೈ ಜೋಡಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು, ಈ ಮೂಲಕ ಒತ್ತಾಯಿಸುತ್ತಿದೆ. ತಾವು ತೆಗೆದುಕೊಂಡ ಕ್ರಮದ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿ ನೀಡ ಬೇಕು ಎಂದು ಕಾಂಗ್ರೆಸ್ ನಿಯೋಗ ಹೇಳಿದೆ,

ನಿಯೋಗದಲ್ಲಿ ಮಾಜಿ ಆರೋಗ್ಯ ಸಚಿವರು ಮತ್ತು ಶಾಸಕರಾದ ಯು.ಟಿ.ಖಾದರ್, ಮಾಜಿ ಮುಖ್ಯ ಸಚೇತಕರು ಮತ್ತು ಶಾಸಕರಾಡ ಐವನ್ ಡಿ ಸೋಜ, ಜಿಲ್ಲಾ  ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ  ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English