ನೈಟ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲು ಮುಖ್ಯ ಮಂತ್ರಿಗಳಿಗೆ ಶ್ರೀ ಐವನ್ ಡಿ ಸೋಜ ವಿನಂತಿ

Wednesday, December 23rd, 2020
ivan D souza

ಮಂಗಳೂರು :  ಡಿಸೆಂಬರ್ 23ರಿಂದ ಜನವರಿ 7 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರಾತ್ರಿ10 ರಿಂದ ಬೆಳಿಗ್ಗೆ 6ಗಂಟೆಯವರೆ ಏರಲಾಗಿದ್ದು, ಕ್ರಿಸ್‌ಮಸ್ ಮತ್ತು ಅನೇಕ ಮದುವೆ ಸಮಾರಂಭಗಳು ಸಂಜೆ ಹೊತ್ತಿನಲ್ಲಿ ನಡೆಯಲಿರುವುದರಿಂದ ಅದರಲ್ಲೂ, ಕ್ರಿಸ್‌ಮಸ್ ಡಿಸೆಂಬರ್ 24 ರಂದು ಸಂಜೆ ವೇಳೆ ಎಲ್ಲಾ ಚರ್ಚುಗಳಲ್ಲಿ ಕ್ರಿಸ್‌ಮಸ್ ಪೂಜೆ ಸಂಭ್ರಮ ನಡೆಯಲಿರುವುದರಿಂದ, ದಿನಾಂಕ 24ರಂದು ಸಂಪೂರ್ಣವಾಗಿ ಕರ್ಫ್ಯೂನಿಂದ ವಿನಾಯಿತಿ ನೀಡಬೇಕೆಂದು ಮತ್ತು ಇತರ ದಿನಗಳಲ್ಲಿ ಹಾಕಿರುವಂತೆ ರಾತ್ರಿ 11ರಿಂದ 5ಗಂಟೆಯವರೆಗೆ ಹಾಕಿರುವ ಕರ್ಫ್ಯೂನಲ್ಲಿ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದರು. […]

ಎ.ಐ.ಸಿ.ಸಿ.ಕಾರ್ಯದರ್ಶಿಯಾಗಿ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜ ನೇಮಕ

Saturday, December 19th, 2020
IvanDSouza

ಮಂಗಳೂರು  : ಎ.ಐ.ಸಿ.ಸಿ.ಕಾರ್ಯದರ್ಶಿಯಾಗಿ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜರವರು ನೇಮಕ-ಕೇರಳ ರಾಜ್ಯದ ಹೊಣೆಗಾರಿಕೆ; ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ಇವರು ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ, ವಿಧಾನ ಪರಿಷತ್ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜರವರನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಕೂಡಲೇ ಜಾರಿಗೆ ತರುವಂತೆ ನೇಮಕ ಮಾಡಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಆಡಳಿತ) ಶ್ರೀ ಕೆ.ಸಿ.ವೇಣುಗೋಪಾಲ್ ಇವರು ಆದೇಶವನ್ನು ಹೊರಡಿಸಿದ್ದಾರೆ. […]

ಸ್ಯಾಂಡ್ ಬಜಾರ್ ಆಪ್ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಮರಳು ಒದಗಿಸಲು ಒತ್ತಾಯ

Tuesday, November 17th, 2020
Sand Bazar

ಮಂಗಳೂರು  :  ಸ್ಯಾಂಡ್ ಬಜಾರ್ ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಕಡಿಮೆ ಮತ್ತು ನ್ಯಾಯಯುತ ದರದಲ್ಲಿ ಗುಣಮಟ್ಟ್ಟದ ಮರಳನ್ನು ಒದಗಿಸಿಕೊಳ್ಳಲು ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರಸ್ತುತ 3 ಯುನಿಟ್ ಮರಳಿಗೆ 17,000/- ರಿಂದ 20,000/- ತನಕ ದರ ವಿಧಿಸಲಾಗುತಿದೆ, ಸಿಮೆಂಟಿಗಿಂತಲೂ ಮರಳಿನ ದರ ಜಾಸ್ತಿಯಾಗಿರುತ್ತದೆ. ಆದುದರಿಂದ ದರ ನಿಗದಿಪಡಿಸಿ ಸ್ಯಾಂಡ್ ಬಜಾರ್ ಮೂಲಕವೇ ಮರಳು ನೀಡಲು ಕಾಂಗ್ರೆಸ್  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಹಿಂದೆ ಕುಮಾರಸ್ವಾಮಿಯವರ […]

ಐವನ್ ಡಿ ಸೋಜ ಜೊತೆ ಕಾರ್ಯಕ್ರಮದಲ್ಲಿ ಇದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್​ಗೆ

Sunday, August 2nd, 2020
Ramanatha rai

ಬಂಟ್ವಾಳ : ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೊನಾ ಸೋಂಕು ದೃಢಪಟ್ಟ  ಬೆನ್ನಲೇ  ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಐವನ್ ಡಿ ಸೋಜ ಜೊತೆ ನಾನು ಇದ್ದೆ  ಹಾಗಾಗಿ ನಾನು ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಜನ ಸಾಮಾನ್ಯರ ಭೇಟಿ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಕ್ಷೇತ್ರದ ಜನರು […]

ಅಂಗವಿಕಲರನ್ನು ಗುರುತಿಸಿ ಕಿಟ್ ನೀಡಿದ ಐವನ್ ಡಿ ಸೋಜ

Friday, April 17th, 2020
Ivan-d-souza

ಮಂಗಳೂರು : ಲಾಕ್ ಡೌನ್ ಆಗಿದಂದಿನಿಂದ ನೊಂದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜ ಇಂದು ಮಂಗಳೂರಿನಲ್ಲಿ ಅಂಗವಿಕಲರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಐವನ್ ಡಿ ಸೋಜ ಅವರು ಬಿಕ್ಷುಕರ ಆದಿಯಾಗಿ, ಬಿದಿಬದಿ ವ್ಯಾಪಾರಿಗಳು, ರಿಕ್ಷಾಚಾಲಕರು, ಟೆಂಪೋ ಮಾಲಕರು ಮೊದಲಾದವರಿಗೆ ತನ್ನ ಸಹಾಯವನ್ನು ಮಾಡಿದ್ದಾರೆ.

ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸ್ಥಳೀಯ ಸಂಸದರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ

Saturday, December 2nd, 2017
Ivan d souza

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ನ್ನು ಸ್ಥಳೀಯ ಸಂಸದರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ.ಸೋಜ ಆರೋಪಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರು-ಕಾರ್ಕಳ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು 20 ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾ.ಹೆ. ಪ್ರಾಧಿಕಾರವು ಇದಕ್ಕೆ ಸಂಬಂಧಿಸಿದಂತೆ ಬೋರ್ಡ್‌ ಬದಲಾಯಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಈ ಹೆದ್ದಾರಿಯಲ್ಲಿ ಸಿಗುವ ಗುರುಪುರ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದೆ. ವಾಹನಗಳ ಓಡಾಟಕ್ಕೆ ಇದು ಅಯೋಗ್ಯ […]

ಐವನ್ ಡಿ ಸೋಜ ಆಪ್ತ ಕಾರ್ಯದರ್ಶಿ ಶಿವರಾಮ ನಾಯ್ಕ್ ಆಕ್ರಮ ಸಂಬಂಧ , ಪತ್ನಿ ಆತ್ಮಹತ್ಯೆ

Saturday, July 22nd, 2017
Shivaram Naik

ಮಂಗಳೂರು : ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಆಪ್ತ ಕಾರ್ಯದರ್ಶಿ ಶಿವರಾಮ ನಾಯ್ಕ್ ಪತ್ನಿ ವೀಣಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಶಿವರಾಮ ನಾಯ್ಕ್ ಅವರಿಗೆ ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧವಿರುವುದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು. ಈ ವಿಷಯದಲ್ಲಿ ವೀಣಾ ಪತಿ ಶಿವರಾಮ್ ಜೊತೆ ಜಗಳ ಆಡಿದ್ದು, ಇಪ್ಪತೈದು ದಿನದ ಹಿಂದೆ ಭಟ್ಕಳದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದರು. ಶುಕ್ರವಾರ ರಾತ್ರಿ ಶಿವರಾಮ್ ವೀಣಾ ಅವರಿಗೆ ದೂರವಾಣಿಕರೆ […]

ಕ್ರೈ ಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಟ್ಯಾಕ್ಸಿ ,ಗೂಡ್ಸ್ ವಾಹನ ಖರೀದಿಗೆ ಸಾಲ

Friday, June 30th, 2017
Ivan

ಮಂಗಳೂರು :  ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ನಿಗಮವಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ ಹಾಲಿ ಇರುವ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಅಥವಾ ಮಂಡಳಿಯಾಗಿ ಪರಿವರ್ತಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಯ ಜೊತೆ ಸಮಾಲೋಚಿಸಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಈ ಬಾರಿ ಕ್ರೈ ಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಟ್ಯಾಕ್ಸಿ ,ಗೂಡ್ಸ್ ವಾಹನ ಖರೀದಿ ಯೋಜನೆ ಸಹಾಯ ಧನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ರೂ. 4ಲಕ್ಷದಿಂದ 7.50ಲಕ್ಷದವರೆಗೆ […]